ಗೋಣಿಕೊಪ್ಪಲು: ಮಳೆಗಾಗಿ ಕಳೆದ ಮೂರು ತಿಂಗಳಿಂದ ಕಾದಿದ್ದ ದಕ್ಷಿಣ ಕೊಡಗಿನಲ್ಲಿ ಶನಿವಾರ ಚದುರಿದಂತೆ ತುಂತುರು ಮಳೆ ಬಿದ್ದು ಜನತೆಯಲ್ಲಿ ಹರ್ಷ ಮೂಡಿಸಿತು. ಹಾತೂರು, ಕುಂದ, ಬಿ.ಶೆಟ್ಟಿಗೇರಿ ಭಾಗಕ್ಕೆ ಸಾಧಾರಣ ಮಳೆ ಬಿದ್ದಿತು. ತುಂತುರು ಮಳೆಗೆ ಮಣ್ಣಿನ ಕಂಪು ಹೊರಸೂಸಿತು.
ಗುರುವಾರ ಕಾರ್ಮಾಡು, ಕಾನೂರು, ಬಿಟ್ಟಂಗಾಲ, ಭಾಗಗಳಿಗೆ ಸಾಧಾರಣ ಮಳೆ ಬಿದ್ದಿತ್ತು. ಬೆಳಿಗಿನಿಂದ ಮಳೆಯ ಕಾವಿದ್ದು ಮಧ್ಯಾಹ್ನ ಬಿದ್ದ ಸ್ವಲ್ಪ ಮಳೆಗೆ ನೆಲದ ಧಗೆ ಮತ್ತಷ್ಟು ಹೆಚ್ಚಾಯಿತು. ಡಾಂಬರು ರಸ್ತೆ ಮೇಲೆ ಮಳೆಯ ಹನಿ ಬೀಳುತ್ತಿದ್ದರೆ ರಸ್ತೆ ಶಾಖ ಬೆಂಕಿ ಹೊಗೆಯಂತೆ ಮೇಲೇಳುತಿತ್ತು. ನೆಲ ತಣಿಯುವಂತೆ ಮಳೆ ಬಿದ್ದಿದ್ದರೆ ವಾತಾವರಣ ತಂಪಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ಕೇವಲ ತುಂತುರು ಮಳೆಯಲ್ಲಿಯೇ ಕಾಲ ಕಳೆದು ಹೋಗುತ್ತಿದೆ.
ಭೂಮಿ ತಣಿಯುವಂತೆ ಮಳೆ ಬೀಳದಿದ್ದರೆ ಮತ್ತಷ್ಟು ಧಗೆ ಹೆಚ್ಚಿ ಅಂತರ್‌ಜಲ ಕಡಿಮೆಯಾಗಲಿದೆ ಎಂಬುದು ಜನತೆಯ ಆತಂಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.