ADVERTISEMENT

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮದಿನ ಆಚರಣೆ

ಮಡಿಕೇರಿಯ ನೇತಾಜಿ ಜಂಕ್ಷನ್‌ನಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 16:19 IST
Last Updated 23 ಜನವರಿ 2025, 16:19 IST
ಮಡಿಕೇರಿ ನಗರದ ವಾರ್ಡ್ ಸಂಖೆಯ 6ರ ರಾಘವೇಂದ್ರ ದೇವಾಲಯದ ಬಳಿಯ ನೇತಾಜಿ ಜಂಕ್ಷನ್‌ನಲ್ಲಿ ಗುರುವಾರ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ 128ನೇ ಜನ್ಮದಿನಾಚರಣೆಯನ್ನು ಸ್ಥಳೀಯರು ಆಚರಿಸಿದರು
ಮಡಿಕೇರಿ ನಗರದ ವಾರ್ಡ್ ಸಂಖೆಯ 6ರ ರಾಘವೇಂದ್ರ ದೇವಾಲಯದ ಬಳಿಯ ನೇತಾಜಿ ಜಂಕ್ಷನ್‌ನಲ್ಲಿ ಗುರುವಾರ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ 128ನೇ ಜನ್ಮದಿನಾಚರಣೆಯನ್ನು ಸ್ಥಳೀಯರು ಆಚರಿಸಿದರು   

ಮಡಿಕೇರಿ: ನಗರದ ವಾರ್ಡ್ ಸಂಖೆಯ 6ರ ರಾಘವೇಂದ್ರ ದೇವಾಲಯದ ಬಳಿಯ ನೇತಾಜಿ ಜಂಕ್ಷನ್‌ನಲ್ಲಿ ಗುರುವಾರ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ 128ನೇ ಜನ್ಮದಿನಾಚರಣೆಯನ್ನು ಸ್ಥಳೀಯರು ಆಚರಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಎಸ್.ಸಿ.ಮೋರ್ಚಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಂ.ರವಿ, ‘ಕ್ರಾಂತಿಕಾರಿ ಆಲೋಚನೆಗಳ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದ್ದ ಅಪ್ರತಿಮ ದೇಶಪ್ರೇಮಿ, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಇಡೀ ಬದುಕನ್ನೇ ಸವೆಸಿದ ನೇತಾಜಿ ಸುಭಾಷ್ ಚಂದ್ರ ಬೋಸ್‌ರ ದೇಶಪ್ರೇಮ ಮತ್ತು ಸಮರ್ಪಣಾಭಾವವನ್ನು ಅವರ ಜನ್ಮದಿನದಂದು ಸ್ಮರಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ’ ಎಂಬ ಸಂದೇಶದ ಮೂಲಕ ಕೋಟಿ ಕೋಟಿ ಭಾರತೀಯರನ್ನು ಒಂದುಗೂಡಿಸಿದ ಮಹಾನ್ ಚೇತನ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಅವರಿಗೆ ನಮ್ಮೆಲ್ಲರ ನಮನವನ್ನು ಸಲ್ಲಿಸಿ, ಸ್ವಾತಂತ್ರ ಹೋರಾಟಕ್ಕಾಗಿ ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ’ ಎಂದರು.

ADVERTISEMENT

ಉದ್ಯಮಿ ಹರೀಶ್‌ ರೈ, ಜನನಿ ಮಹಿಳಾ ಮಂಡಳಿಯ ಪದಾಧಿಕರಿಗಳು, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.