ADVERTISEMENT

ವಿರಾಜಪೇಟೆ: 3.4 ಕೆ.ಜಿ ಗಾಂಜಾ ವಶ, ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 1:49 IST
Last Updated 9 ಸೆಪ್ಟೆಂಬರ್ 2020, 1:49 IST
ವಿರಾಜಪೇಟೆ ನಗರ ಠಾಣೆಯ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೊಪಿಗಳನ್ನು ಬಂಧಿಸಿರುವುದು
ವಿರಾಜಪೇಟೆ ನಗರ ಠಾಣೆಯ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೊಪಿಗಳನ್ನು ಬಂಧಿಸಿರುವುದು   

ವಿರಾಜಪೇಟೆ: ಗಾಂಜಾ ದಂಧೆ ನಡೆಸುತ್ತಿದ್ದ ಐವರನ್ನು ಮಂಗಳವಾರ ಬಂಧಿಸಿರುವ ಪೊಲೀಸರು, ಬಂಧಿತರಿಂದ ₹ 1.10 ಲಕ್ಷ ಮೌಲ್ಯದ 3.4 ಕೆ.ಜಿ. ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಸುಳಿವು ಪಡೆದ ನಗರ ಠಾಣೆಯ ಪೊಲೀಸರು, ಪಟ್ಟಣದ ಸುಂಕದಕಟ್ಟೆಯ ಬಳಿ ದಂಧೆಯಲ್ಲಿ ತೊಡಗಿದ್ದ ಫಾರೂಕ್, ಮುದಾಶೀರ್, ರಫೀಕ್, ಮನು ಹಾಗೂ ಮಹೇಶ್ ಎಂಬುವವರನ್ನು ಬಂಧಿಸಿ, ಗಾಂಜಾ ಇರಿಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳ ಬಳಿ, ಮಾರಾಟಕ್ಕೆ ಸಿದ್ಧವಾಗಿಟ್ಟುಕೊಂಡ 50 ಗ್ರಾಂ ಮತ್ತು 100 ಗ್ರಾಂ ಪೊಟ್ಟಣಗಳಿದ್ದವು. ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ
ಬಂಧನಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ADVERTISEMENT

ಡಿ.ವೈಎಸ್.ಪಿ ಸಿ.ಟಿ.ಜಯಕುಮಾರ್, ಸಿಪಿಐ ಕ್ಯಾತೆಗೌಡ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಎಸ್ಐ ಎಚ್.ಎಸ್.ಬೋಜಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗಿರೀಶ್, ಸಂತೋಷ್, ಮುಸ್ತಾಫ ಹಾಗೂ ಮುನೀರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.