ADVERTISEMENT

ಸದ್ದಿಲ್ಲದೇ ದೃಷ್ಟಿ ಕದ್ದೊಯ್ಯುವ ಗ್ಲಾಕೋಮಾ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 7:18 IST
Last Updated 17 ಮಾರ್ಚ್ 2025, 7:18 IST
ಗ್ಲಾಕೋಮಾ
ಗ್ಲಾಕೋಮಾ   

ಮಡಿಕೇರಿ: ಗ್ಲಾಕೋಮಾ ಕಾಯಿಲೆ ಕುರಿತು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ನಿರ್ಲಕ್ಷ್ಯ ವಹಿಸಿದರೆ ಇದು ‘ಸದ್ದಿಲ್ಲದೇ ದೃಷ್ಟಿ ಕದ್ದೊಯ್ಯುವ ಕಳ್ಳ’ ಎಂದು ಕರೆಯಬಹುದಾದ ಕಾಯಿಲೆಯಾಗಿದ್ದು, ಹಾಗಾಗಿ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದೆ.

ಗ್ಲಾಕೋಮಾ ಕಣ್ಣಿಗೆ ಸಂಬಂಧಪಟ್ಟ ಆತಂಕಕಾರಿ ಕಾಯಿಲೆಯ ಸ್ಥಿತಿಗಳಲ್ಲೊಂದು. ಇದರಿಂದ ಕಣ್ಣಿನ ದೃಷ್ಟಿ ಹೋಗುತ್ತದೆ. ಸಾಧಾರಣವಾಗಿ 40 ವರ್ಷಗಳಿಗಿಂತಲೂ ಹೆಚ್ಚಿನ ವಯಸ್ಸಿನವರಿಗೆ, ಅದರಲ್ಲೂ ಅನುವಂಶಿಕವಾಗಿ ಗ್ಲಾಕೋಮಾ ರೋಗವು ಹರಡುವುದು ಕಂಡು ಬರುತ್ತದೆ.

ADVERTISEMENT

ಯಾವುದೇ ರೋಗ ಲಕ್ಷಣಗಳಿಲ್ಲದೆ ದೃಷ್ಟಿ ಕದಿಯುವ ಕಾಯಿಲೆ ಇದಾಗಿ. 40 ವಯಸ್ಸಿನ ನಂತರ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಕಣ್ಣಿನ ಒತ್ತಡ ಪರೀಕ್ಷಿಸಿಕೊಳ್ಳಬೇಕು, ಬೆಳಕಿನ ಸುತ್ತ ಕಾಮನಬಿಲ್ಲಿನಂತಹ ವೃತ್ತಗಳನ್ನು ಕಾಣುವುದು. ತಲೆನೋವು ಹಾಗೂ ಕಣ್ಣು ನೋವು, ಅಸ್ಪಷ್ಟ ದೃಷ್ಟಿ ಹಾಗೂ ನೋಟದ ವಲಯ ಕುಗ್ಗುತಾ ಹೋಗುವುದು. ಪದೇ ಪದೇ ಕನ್ನಡಕ ಬದಲಾಯಿಸಬೇಕಾಗಿ ಬರುವುದು. ಈ ಬಗೆಯ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ನೇತ್ರ ತಜ್ಞರನ್ನು ಕೂಡಲೆ ಸಂಪರ್ಕಸಿ, ಗ್ಲಾಕೋಮ ಇದೆ ಅಥಾವ ಇಲ್ಲವೇ ಎಂದು ಪರೀಕ್ಷಿಸಿ ದೃಢಪಡಿಸಿಕೊಳ್ಳಬೇಕು.

ಗ್ಲಾಕೋಮಾವನ್ನು ಕಣ್ಣಿನ ಒತ್ತಡ ಮಾಪನ ಪರೀಕ್ಷೆ, ನೋಟದ ವಲಯ ಪರೀಕ್ಷೆ, ಕಣ್ಣಿನ ನರದ ಪರೀಕ್ಷೆಯಿಂದ ದೃಢಪಡಿಸಬಹುದು.

ಗ್ಲಾಕೋಮಾ ಕಾಯಿಲೆಗೆ ಪ್ರಥಮ ಹಂತದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ಸಂಪೂರ್ಣ ಕುರುಡುತನ ಉಂಟಾಗುತ್ತದೆ.

ಗ್ಲಾಕೋಮಾವನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಆದರೆ, ಪ್ರಾರಂಭದಲ್ಲಿ ಪತ್ತೆ ಹಚ್ಚಿ ಸೂಕ್ತವಾದ ಚಿಕಿತ್ಸೆಯನ್ನು ನಿಯಮಿತವಾಗಿ ಪಡೆಯುವುದರಿಂದ ಕಣ್ಣು ಕುರುಡುತನವನ್ನು ತಪ್ಪಿಸಬಹುದು.

ಕಣ್ಣಿಗೆ ಜೀವನ ಪರ್ಯಂತ ಔಷಧ ಹಾಕುವುದು ಮತ್ತು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಿಕೊಳ್ಳಬಹುದು ಎಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ತಿಳಿಸಿದೆ.

ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬಹುದು ಅಥವಾ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.