ADVERTISEMENT

ನಾಪೋಕ್ಲು: ಆಟೊ ಪಲ್ಟಿ- ಪ್ರಯಾಣಿಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 7:06 IST
Last Updated 23 ಆಗಸ್ಟ್ 2024, 7:06 IST
ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ಗುರುವಾರ ಪಲ್ಟಿಯಾಗಿ ಜಖಂಗೊಂಡ ಆಟೊ
ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ಗುರುವಾರ ಪಲ್ಟಿಯಾಗಿ ಜಖಂಗೊಂಡ ಆಟೊ   

ನಾಪೋಕ್ಲು: ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ಗುರುವಾರ ಚಾಲಕನ ನಿಯಂತ್ರಣ ತಪ್ಪಿ ಆಟೊ ರಿಕ್ಷಾ ಪಲ್ಟಿಯಾಗಿ ಚಾಲಕ ಸೇರಿದಂತೆ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಎಮ್ಮೆಮಾಡು ಬಳಿಯ ಕೂರುಳಿ ಪರಂಬುವಿನಿಂದ ಎಮ್ಮೆಮಾಡು ಗ್ರಾಮದತ್ತ ತೆರಳುತ್ತಿದ್ದಾಗ ಇಳಿಜಾರಿನಲ್ಲಿ ಉರುಳಿದೆ.

ಚಾಲಕ ಇಬ್ರಾಹಿಂ ಹಾಗೂ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪೋಕ್ಲು ಠಾಣೆ ಪಿಎಸ್‌ಐ ಮಂಜುನಾಥ್ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

Graphic text / Statistics - ನಾಪೋಕ್ಲು: ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾ ವೊಂದು ಪಲ್ಟಿಯಾಗಿ ಚಾಲಕ ಸೇರಿದಂತೆ ಪ್ರಯಾಣಿಕರು ಗಂಭೀರವಾಗಿ ಗಾಯಕೊಂಡ ಘಟನೆ ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ. ಗುರುವಾರ ಬೆಳಿಗ್ಗೆ ಎಮ್ಮೆಮಾಡು ಬಳಿಯ ಕೂರುಳಿ ಪರಂಬುವಿನಿಂದ ಎಮ್ಮೆಮಾಡು ಗ್ರಾಮದತ್ತ ತೆರಳುತ್ತಿದ್ದ ಆಟೋರಿಕ್ಷಾ ಕೂರುಳಿ-ಎಮ್ಮೆಮಾಡು ಸಂಪರ್ಕ ರಸ್ತೆಯ ಇಳಿಜಾರಿನಲ್ಲಿ ಉರುಳಿ ಬಿದ್ದಿದ್ದು ಅಪಘಾತ ಸಂಭವಿಸಿದೆ. ಆಟೋ ಚಾಲಕ ಇಬ್ರಾಹಿಂ ಸೇರಿದಂತೆ ಆಟೋದಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗಂಭೀರ ಗಾಯಗಳಾಗಿದ್ದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ನಾಪೋಕ್ಲು ಠಾಣೆಯ ಠಾಣಾಧಿಕಾರಿ ಮಂಜುನಾಥ್ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.