ನಾಪೋಕ್ಲು: ಸಮೀಪದ ಬೇತು ಗ್ರಾಮದ ಕೊಂಡೀರ ಪೂವಣ್ಣ (ಗಿರಿ) ಎಂಬುವರ ತೋಟಕ್ಕೆ ಬುಧವಾರ ಮಧ್ಯಾಹ್ನ ಬೆಂಕಿ ಬಿದ್ದು ನಷ್ಟ ಸಂಭವಿಸಿದೆ.
ಬುಧವಾರ ಮಧ್ಯಾಹ್ನ ಪೂವಣ್ಣ ಅವರ ಗದ್ದೆಯ ಹುಲ್ಲಿನ ರಾಶಿಗೆ ಬೆಂಕಿ ತಗುಲಿದ್ದು, ಉದ್ದಕ್ಕೂ ವ್ಯಾಪಿಸಿದೆ. ಬೆಂಕಿ ತೋಟಕ್ಕೂ ಹಬ್ಬಿದ್ದು ಸುಮಾರು 50 ಗಿಡಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಕ್ಕೆ ಬಂದರೂ ಸ್ಥಳಕ್ಕೆ ತೆರಳಲಾಗದೇ ಹಿಂತಿರುಗಿದರು. ಗ್ರಾಮಸ್ಥರು ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.