ADVERTISEMENT

ವಿದ್ಯಾರ್ಥಿನಿಯರ ಮೇಲೆ ಹಲ್ಲೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 15:03 IST
Last Updated 19 ನವೆಂಬರ್ 2021, 15:03 IST

ಶನಿವಾರಸಂತೆ (ಕೊಡಗು): ಇಲ್ಲಿನ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ಪಿಯು ಕಾಲೇಜಿಗೆ ಹೋಗಿ ವಾಪಸ್‌ ಬರುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಪುಂಡರ ಗುಂಪೊಂದು ಹಲ್ಲೆ ನಡೆಸಿದ್ದು, ಆರೋಪಿಗಳಾದ ಕೌಶಿಕ್‌ ಹಾಗೂ ಪ್ರಜ್ವಲ್‌ರನ್ನು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸ್‌ ಬಂದೋಬಸ್ತ್‌ ಹೆಚ್ಚಿಸಲಾಗಿದೆ.

‘ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಬಸ್‌ಗಾಗಿ ಕಾಯುತ್ತಿದ್ದಅನ್ಹ ರಿಯಾಜ್ ಹಾಗೂ ಜುಲೈಕಾ ನಾಫಿಯಾ ಅವರ ಮೇಲೆ ಹಲ್ಲೆ ನಡೆಸಿದೆ’ ಎಂದು ಆರೋಪಿಸಿ, ಪೋಷಕರಾದ ಕೊಡ್ಲಿಪೇಟೆಯ ಎಂ.ಎಸ್.ರಿಯಾಜ್ ಪಾಶ, ಬ್ಯಾಡಗೊಟ್ಟದ ಅಬೂಬಕ್ಕರ್ ಶನಿವಾರಸಂತೆ ಠಾಣೆಗೆ ದೂರು ನೀಡಿದ್ದಾರೆ.
‘ಮದನ್ ಮತ್ತು ತನ್ಮಯ್ ಸೇರಿದಂತೆ 30ರಿಂದ 40 ಮಂದಿಯ ಗುಂಪು ಹಲ್ಲೆ ನಡೆಸಿದೆ’ ಎಂದು ಆರೋಪಿಸಿದ್ದಾರೆ.

‘ಆರೋಪಿಗಳು, ಹೆಣ್ಣುಮಕ್ಕಳನ್ನು ಎಳೆದಾಡಿ ಮಾನಸಿಕವಾಗಿ, ದೈಹಿಕವಾಗಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಹಲ್ಲೆ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಹಲ್ಲೆಯಿಂದ ದೇಹದ ಮೇಲೆ ಗಾಯಗಳಾಗಿವೆ. ಮಾಸ್ಕ್ ಮತ್ತು ಬುರ್ಕಾ ಹರಿದು ಹಾಕಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT