ADVERTISEMENT

ಕುಶಾಲನಗರ | ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 7:20 IST
Last Updated 1 ಆಗಸ್ಟ್ 2025, 7:20 IST
ಕುಶಾಲನಗರ ಸುತ್ತಮುತ್ತ ಮನೆಗಳಲ್ಲಿ ಪಡಿತರ ಚೀಟಿಯನ್ನು ಅಕ್ಕಿಯನ್ನು ಖರೀದಿ ಮಾಡಿ ಅಧಿಕ ಬೆಲೆಗೆ ಕಾಳಸಂತೆಯಲ್ಲಿ‌ ಮಾರಾಟ ಮಾಡಲು ಸಾಗಿಸುತ್ತಿದ್ದ ಸಂದರ್ಭ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಮಾಲು ಸಮೇತ ವ್ಯಕ್ತಿಯನ್ನು ವಶ ಪಡೆದಿದ್ದಾರೆ.
ಕುಶಾಲನಗರ ಸುತ್ತಮುತ್ತ ಮನೆಗಳಲ್ಲಿ ಪಡಿತರ ಚೀಟಿಯನ್ನು ಅಕ್ಕಿಯನ್ನು ಖರೀದಿ ಮಾಡಿ ಅಧಿಕ ಬೆಲೆಗೆ ಕಾಳಸಂತೆಯಲ್ಲಿ‌ ಮಾರಾಟ ಮಾಡಲು ಸಾಗಿಸುತ್ತಿದ್ದ ಸಂದರ್ಭ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಮಾಲು ಸಮೇತ ವ್ಯಕ್ತಿಯನ್ನು ವಶ ಪಡೆದಿದ್ದಾರೆ.   

ಕುಶಾಲನಗರ: ಮನೆ ಮನೆಗಳಿಗೆ ತೆರಳಿ ಕಡಿಮೆ ಬೆಲೆಗೆ ಪಡಿತರ ಅಕ್ಕಿಯನ್ನು ಖರೀದಿಸಿ ಕಾಳಸಂತೆಯಲ್ಲಿ‌ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ಸುಂದರನಗರ ಗ್ರಾಮದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಅಕ್ಕಿಯನ್ನು ವಶ ಪಡಿಸಿಕೊಂಡಿದ್ದಾರೆ.

ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕು ಆಹಾರ ನಿರೀಕ್ಷಕಿ ಎಂ.ಎಸ್. ಸ್ವಾತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಕ್ಕಿ ಸಂಗ್ರಹ ದಂಧೆಯನ್ನು ಪತ್ತೆಹಚ್ಚಿದ್ದಾರೆ‌.

ಸುಂಟಿಕೊಪ್ಪದ ಗದ್ದೆಹಳ್ಳದಿಂದ ಗೂಡ್ಸ್ ಆಟೋವನ್ನು ಹಿಂಬಾಲಿಸಿದಾಗ ಮನೆಯೊಂದರಿಂದ ಅಕ್ಕಿ ಸಂಗ್ರಹಿಸುತ್ತಿದ್ದ ಸಂದರ್ಭ ದಾಳಿ ನಡೆಸಿ 3 ಕ್ವಿಂಟಲ್‌ ಅಕ್ಕಿ ಹಾಗೂ ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಆಟೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಅಕ್ಕಿ ಲೋಡಿಂಗ್ ಕೆಲಸಕ್ಕೆ ಬಂದಿದ್ದ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ.

ADVERTISEMENT

ಈ ಕುರಿತು ಮಹಜರು ನಡೆಸಿ ಮುಂದಿನ ಕ್ರಮಕ್ಕೆ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಲಾಗಿದೆ. ಕಾರ್ಯಾಚರಣೆ ಸಂದರ್ಭ ಇಲಾಖೆ ಕಂಪ್ಯೂಟರ್ ಆಪರೇಟರ್ ಚೇತನ್ ಭಾಗವಹಿಸಿದ್ದರು.

ಕುಶಾಲನಗರ ಸುತ್ತಮುತ್ತ ಮನೆಗಳಲ್ಲಿ ವಶಪಡಿಸಿಕೊಂಡ ಪಡಿತರ ಅಕ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.