ADVERTISEMENT

ಗೊಂದಲದಲ್ಲಿ ನಡೆದ ಹರಾಜು ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 5:54 IST
Last Updated 14 ಮಾರ್ಚ್ 2024, 5:54 IST
ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಸೇರಿದ ಹಸಿ ಮೀನು ಮಾರುಕಟ್ಟೆ, ಬಸ್ ನಿಲ್ದಾಣದ ಶುಲ್ಕ, ಸಂತೆ ಮಾರುಕಟ್ಟೆ ಶುಲ್ಕಕ್ಕೆ ಹರಾಜು ಪ್ರಕ್ರಿಯೆಯು ಮಂಗಳವಾರ ಶನಿವಾರಸಂತೆಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು
ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಸೇರಿದ ಹಸಿ ಮೀನು ಮಾರುಕಟ್ಟೆ, ಬಸ್ ನಿಲ್ದಾಣದ ಶುಲ್ಕ, ಸಂತೆ ಮಾರುಕಟ್ಟೆ ಶುಲ್ಕಕ್ಕೆ ಹರಾಜು ಪ್ರಕ್ರಿಯೆಯು ಮಂಗಳವಾರ ಶನಿವಾರಸಂತೆಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು   

ಶನಿವಾರಸಂತೆ: ಇಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ಹಸಿ ಮೀನು ಮಾರುಕಟ್ಟೆ, ಬಸ್ ನಿಲ್ದಾಣದ ಶುಲ್ಕ, ಸಂತೆ ಮಾರುಕಟ್ಟೆ ಶುಲ್ಕಕ್ಕೆ ಹರಾಜು ಪ್ರಕ್ರಿಯೆಯು ಮಂಗಳವಾರ ಶನಿವಾರಸಂತೆಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಹರಾಜು ಪ್ರಕ್ರಿಯೆ ಆರಂಭದಲ್ಲಿ ಟೆಂಡರ್‌ದಾರರು ಮತ್ತು ಆಡಳಿತ ಮಂಡಳಿಯ ಸದಸ್ಯರೊಡನೆ ಜಿಎಸ್‌ಟಿ ಪಾವತಿಯ ಬಗ್ಗೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಹರಾಜು ಪ್ರಕ್ರಿಯೆ ನಿಯಮದಲ್ಲಿ ಜಿಎಸ್‌ಟಿ ಪಾವತಿಯ ಬಗ್ಗೆ ತಿಳಿಸಿದ್ದರೂ, ಜಿಎಸ್‌ಟಿಯನ್ನು ಯಾರು ಪಾವತಿ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಇರಲಿಲ್ಲ. ಹಾಗಾಗಿ, ಟೆಂಡರ್‌ದಾರರಲ್ಲಿ ಹರಾಜಿನಲ್ಲಿ ಭಾಗವಹಿಸುವ ಮುನ್ನ ಜಿಎಸ್‌ಟಿ ಪಾವತಿಯ ಬಗ್ಗೆ ಗೊಂದಲ ಉಂಟಾಯಿತು. ನಂತರ, ಆಡಳಿತ ಮಂಡಳಿ ಸದಸ್ಯರು ಚರ್ಚಿಸಿ ಗ್ರಾಮ ಪಂಚಾಯಿತಿ ಕಡೆಯಿಂದ ಜಿಎಸ್‌ಟಿ ಪಾವತಿಯ ಬಗ್ಗೆ ತೀರ್ಮಾನಿಸಿದರು.

ADVERTISEMENT

ಈ ವೇಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಅಹಮದ್, ಸದಸ್ಯರಾದ ಎಸ್.ಎನ್.ರಘು, ಎಚ್.ಸಿ.ಶರತ್ ಶೇಖರ್, ಮಧು ಫರ್ಜಾನ ಬಾನು, ಸರೋಜಾ ಶೇಖರ್, ಸರಸ್ವತಿ, ಪಿಡಿಒ ಹರೀಶ್, ಕಾರ್ಯದರ್ಶಿ ದೇವರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.