ADVERTISEMENT

ಸುಂಟಿಕೊಪ್ಪದಲ್ಲಿ ಮಂಡಲ ಪೂಜೋತ್ಸವ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 6:22 IST
Last Updated 27 ಡಿಸೆಂಬರ್ 2024, 6:22 IST
ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆದ 54ನೇ ವರ್ಷದ ಮಂಡಲ ಪೂಜೋತ್ಸವದ .ಅಂಗವಾಗಿ ಗುರುವಾರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ನಡೆದ 54ನೇ ವರ್ಷದ ಮಂಡಲ ಪೂಜೋತ್ಸವದ .ಅಂಗವಾಗಿ ಗುರುವಾರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.   

ಸುಂಟಿಕೊಪ್ಪ: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ 54ನೇ ವರ್ಷದ ಮಂಡಲ ಪೂಜೋತ್ಸವ  ಶ್ರದ್ಧಾಭಕ್ತಿಯಿಂದ ಗುರುವಾರ ನಡೆಯಿತು.

ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಪ್ರಧಾನ ಅರ್ಚಕ ಗಣೇಶ್ ಭಟ್ ನೇತೃತ್ವದಲ್ಲಿ ಮಂಜುನಾಥ್ ಭಟ್  ಹಾಗೂ ತಂಡ ಪೂಜೆಗಳನ್ನು ನಡೆಸಿದರು.

ಬೆಳಿಗ್ಗೆ ಗಣಪತಿ ಹೋಮ, ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ,  ಅಯ್ಯಪ್ಪ ಸ್ವಾಮಿಗೆ ಚಂಚಾಮೃತ ಅಭಿಷೇಕ, ಲಕ್ಷಾರ್ಚನೆ ನೆರವೇರಿತು. ಮಧ್ಯಾಹ್ನ ಅಯ್ಯಪ್ಪ ವ್ರತಧಾರಿಗಳಿಂದ ಪಲ್ಲಪೂಜೆ, ಬಿಲ್ವಪತ್ರೆ , ತುಳಸಿ , ದೂರ್ವಾಚನೆ, ಪಂಚಾಮೃತ ಅಭಿಷೇಕ ನಡೆದು 'ಸ್ವಾಮಿಯೇ ಶರಣಂ ಅಯ್ಯಪ್ಪ' ಉದ್ಘೋಷದೊಂದಿಗೆ ಸಮಾಪ್ತಿಗೊಳಿಸಿದರು. ನಡೆಯಿತು.  ಅಯ್ಯಪ್ಪ ಸ್ವಾಮಿ, ಗಣಪತಿಗೆ ಮಹಾಪೂಜೆ, ಆರತಿ ಪೂಜೆ ಕೇರಳದ ಚೆಂಡೆಮೇಳ , ಪಟಾಕಿ  ಭಕ್ತರನ್ನು ಆಕರ್ಷಿಸಿತು. ತೀರ್ಥಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ADVERTISEMENT

ಕೊಡಗರಹಳ್ಳಿ, ಕಂಬಿಬಾಣೆ, ಮಾದಾಪುರ, ಹರದೂರು, ಕೆದಕಲ್, ಬಾಳೆಕಾಡು, ಮತ್ತಿಕಾಡು, ಏಳನೇ ಹೊಸಕೋಟೆ, ಕುಶಾಲನಗರ, ಗರಗಂದೂರು ಸೇರಿದಂತೆ ಹಲವೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೈವತಾ ಕಾರ್ಯದಲ್ಲಿ ಭಾಗವಹಿಸಿ ಪುನೀತರಾದರು.

ದೇವಾಲಯ ಮತ್ತು ಪಟ್ಟಣವನ್ನು ವಿದ್ಯುತ್ ದೀಪ ಮತ್ತು ತಳಿರು ತೋರಣಗಳಿಂದ ಮತ್ತು ಬಗೆಬಗೆಯ. ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಾಲಯ ಸಮಿತಿಯ ಅಧ್ಯಕ್ಷ ಬಿ‌‌.ಎಂ.ಸುರೇಶ್, ಗೌರವಾಧ್ಯಕ್ಷರುಗಳಾದ ಬಾಲಕೃಷ್ಣ, ಮುತ್ತಯ್ಯ,ಉಪಾಧ್ಯಕ್ಷರಾದಕೆ.ರವಿ, ಎಂ.ಮಂಜುನಾಥ್, ಬಿ.ಕೆ.ಪ್ರಶಾಂತ್ ಕುಮಾರ್ ಪ್ರಧಾನ ಕಾರ್ಯದರ್ಶಿ ಎಂ.ಚಂದ್ರ, ಖಜಾಂಚಿ ಎಂ.ಆರ್.ಶಶಿಕುಮಾರ್, ಪದಾಧಿಕಾರಿಗಳಾದ ಕನಿಶ್, ವಿ.ಎ.ಸಂತೋಷ್,ಕೆ.ಕೆ.ವಾಸು, ಸಿ.ಸಿ.ಸುನಿಲ್,ಧನುಕಾವೇರಪ್ಪ, ಶ್ರೀಧರನ್, ಸುರೇಶ್ ಗೋಪಿ ಶಭರಿಮಲೆ ಆಡಳಿತ ಮಂಡಳಿಯ ಗೋಕುಲ್ ಸ್ವಾಮಿ ಸೇರಿದಂತೆ ದೇ ವಾಲಯ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

ಅದ್ಧೂರಿಯ ಮೆರವಣಿಗೆ: ಇಲ್ಲಿನ ಅಯ್ಯಪ್ಪ ಸ್ವಾಮಿ ದೇಗುಲದ ಮಂಡಲ ಪೂಜೋತ್ಸವದ ಅಂಗವಾಗಿ ಗುರುವಾರ ರಾತ್ರಿ ಅದ್ದೂರಿ  ಶೋಭಯಾತ್ರೆ ನಡೆಯಿತು.  ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಚೆಂಡೆಮೇಳ ಹಾಗೂ ನೂರಾರು ಸಂಖ್ಯೆ ಹೆಣ್ಣು ಮಕ್ಕಳು ದೀಪ ಹಿಡಿದು ಶ್ರದ್ಧೆ, ಶಿಸ್ತಿನಿಂದ ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಮಹಾಗಣಪತಿ ದೇವಾಲಯ,  ಪ್ರಮುಖ ಬೀದಿಯಲ್ಲಿ, ಗದ್ದೆಹಳ್ಳದವರೆಗೆ ಸಾಗಿ, ಅಲ್ಲಿಂದ ಹಿಂತಿರುಗಿ ದೇವಾಲಯದಲ್ಲಿ ಸಮಾಪ್ತಿ ಗೊಂಡಿತು. ಪುಟಾಣಿ‌ ಮಕ್ಕಳು ಅಯ್ಯಪ್ಪನ ಗೀತೆಯನ್ನು ಹಾಡುತ್ತಾ ಸಾಗಿದರು. ಸಿಡಿಮದ್ದುಗಳ ಚಿತ್ತಾರ ಜನಾಕರ್ಷಣೆಗೊಂಡಿತು.

  ಪ್ರಧಾನ ಅರ್ಚಕ ಗಣೇಶ್ ಭಟ್ ಅವರ ನೇತೃತ್ವದಲ್ಲಿ ದೀಪರಾಧನೆ ನೆರವೇರಿತು.
ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ‌ ವಿನಿಯೋಗ ನಡೆಯಿತು. ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.