ADVERTISEMENT

ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಆನೆಮರಿ ಜನನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 13:21 IST
Last Updated 16 ಮಾರ್ಚ್ 2020, 13:21 IST
ಗೋಣಿಕೊಪ್ಪಲು ಬಳಿಯ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ವರಲಕ್ಷ್ಮಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ
ಗೋಣಿಕೊಪ್ಪಲು ಬಳಿಯ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ವರಲಕ್ಷ್ಮಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ   

ಗೋಣಿಕೊಪ್ಪಲು: ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ವರಲಕ್ಷ್ಮಿ (52) ಸೋಮವಾರ ಬೆಳಿಗ್ಗೆ ಹೆಣ್ಣು ಮರಿಗೆ ಜನ್ಮ ನೀಡಿದೆ.

15 ವರ್ಷಗಳಿಂದ ಶಿಬಿರದಲ್ಲಿರುವ ವರಲಕ್ಷ್ಮಿ ಹಿಂದೆಯೂ ಎರಡು ಮರಿಗಳಿಗೆ ಜನ್ಮ ನೀಡಿತ್ತು.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಮೈಸೂರು ದಸರಾದ ಗಜಪಡೆಯಲ್ಲಿಯೂ ವರಲಕ್ಷ್ಮಿ ಪಾಲ್ಗೊಂಡಿತ್ತು. ಆನೆ ಮರಿ ಆರೋಗ್ಯಕರವಾಗಿದೆ ಎಂದು ಹುಣಸೂರು ವನ್ಯ ಜೀವಿ ವಿಭಾಗದ ವನ್ಯಜೀವಿ ವೈದ್ಯಾಧಿಕಾರಿ ಮುಜಿಬ್ ರೆಹಮನ್ ತಿಳಿಸಿದ್ದಾರೆ.

ADVERTISEMENT

ಆನೆ ಮರಿ ಮತ್ತು ತಾಯಿ ಆನೆಯನ್ನು ಶಿಬಿರದ ಇತರ ಆನೆಗಳು ಮಧ್ಯದಲ್ಲಿಟ್ಟುಕೊಂಡು ಪ್ರೀತಿಯಿಂದ ನೋಡಿಕೊಳ್ಳುತ್ತಿವೆ. ಪುಟಾಣಿ ಮರಿ ತಾಯಿಯ ಒಡಲಲ್ಲಿ ಓಡಾಡಿಕೊಂಡಿದೆ.

ವರಲಕ್ಷ್ಮಿ ಆನೆ ಮಾವುತ ರವಿ ಆನೆಗೆ ಬೇಕಾದ ಆಹಾರ ಮತ್ತಿತರ ವಸ್ತುಗಳನ್ನು ಎಚ್ಚರಿಕೆಯಿಂದ ಕೊಡುತ್ತಿದ್ದಾನೆ. ವರಲಕ್ಷ್ಮಿ ಆನೆಯೊಂದಿಗೆ ಯೋಗ ಲಕ್ಷ್ಮಿ ಆನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.