
ಕುಶಾಲನಗರ: ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನ ಯೋಗಿನಾರೇಯಣ ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಆರ್.ಸೋಮಶೇಖರ್ ಆಯ್ಕೆಯಾಗಿದ್ದಾರೆ.
ಪಟ್ಟಣದ ಸಂಘದ ಕಚೇರಿಯಲ್ಲಿ ಹಿಂದಿನ ಅಧ್ಯಕ್ಷ ಬಿ.ಎಸ್.ಆರ್.ಬಾಬಣ್ಣ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
‘ಸಂಘದ ಗೌರವ ಅಧ್ಯಕ್ಷರಾಗಿ ಆರ್.ಬಾಬಣ್ಣ, ಉಪಾಧ್ಯಕ್ಷರಾಗಿ ಟಿ.ಎಸ್.ನಿರಂಜನ್, ಟಿ.ಆರ್.ಜಗದೀಶ್, ಸಿ.ಆರ್.ಮದನ್, ಕಾರ್ಯದರ್ಶಿಯಾಗಿ ಟಿ.ಎನ್.ಜಯರಾಮ್, ಸಹಕಾರ್ಯದರ್ಶಿಯಾಗಿ ಸಿ.ಜಗದೀಶ್, ಖಜಾಂಚಿಯಾಗಿ ಜಿ.ಆರ್.ಸಂಧ್ಯಾಗಣೇಶ್, ನಿರ್ದೇಶಕರಾಗಿ ಕೆ.ಬಾಲಸುಬ್ರಮಣ್ಯಂ, ಉಮೇಶ್, ಕಿರಣ್, ಕುಶ, ನೂತನ್, ಸವಿತಾ ದಯಾನಂದ, ಮಂಜುಳಾ, ಗೌರವ ಸಲಹೆಗಾರರಾಗಿ ಟಿ.ಎಸ್.ಬಾಲಕೃಷ್ಣ, ಟಿ.ಬಿ.ಸತೀಶ್, ಟಿ.ಡಿ.ದಯಾನಂದ, ಎಂ.ಆರ್.ಗಣೇಶ್ ನೇಮಕವಾಗಿದ್ದಾರೆ’ ಎಂದು ಸಂಘದ ಕಾರ್ಯದರ್ಶಿ ಜಯರಾಮ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.