ADVERTISEMENT

ಸೋಮವಾರಪೇಟೆ: ಪುಷ್ಪಗಿರಿ ಬೆಟ್ಟದಲ್ಲಿ ಬೆಳಗಿದ ಬೃಹತ್ ದೀಪ 

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 6:07 IST
Last Updated 17 ಜನವರಿ 2024, 6:07 IST
ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಬೆಟ್ಟದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೋಮವಾರ ಪೂಜೆ ಸಲ್ಲಿಸಿ ಬೃಹತ್ ದೀಪ ಹೊತ್ತಿಸಿರುವುದು.
ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಬೆಟ್ಟದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೋಮವಾರ ಪೂಜೆ ಸಲ್ಲಿಸಿ ಬೃಹತ್ ದೀಪ ಹೊತ್ತಿಸಿರುವುದು.   

ಸೋಮವಾರಪೇಟೆ: ತಾಲ್ಲೂಕಿನ ಪುಷ್ಪಗಿರಿಯ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೋಮವಾರ ದೇವಾಲಯದ ಅರ್ಚಕ ನಂದೀಶ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿದರು.

ಕುಮಾರಳ್ಳಿ, ಕೊತ್ನಳ್ಳಿ, ಜಕ್ಕನಳ್ಳಿ, ಕುಡಿಗಾಣ ಗ್ರಾಮಸ್ಥರು ಸೇರಿದಂತೆ ಸುಗ್ಗಿಯ ಹಬ್ಬದ ದೇವರ ಒಡೆಕಾರರು ಪುಷ್ಪಗಿರಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಅಲ್ಲಿರುವ ಬೃಹತ್ ದೀಪವನ್ನು ಬೆಳಗಿಸಿ, ಗಣಪತಿ, ಕುಮಾರಲಿಂಗೇಶ್ವರ ಪಾದ ಪೂಜೆ ಸಲ್ಲಿಸಿದರು. ನಂತರ ದೀಪದೊಂದಿಗೆ ಆಗಮಿಸಿ ಶಾಂತಳ್ಳಿಯ ಕುಮಾರಲಿಂಗೇಶ್ವರ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಬೆಟ್ಟದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೋಮವಾರ ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯದ ಅರ್ಚಕ ನಂದೀಶ್ ಪೂಜೆ ಸಲ್ಲಿಸಿದರು.

ಬೃಹತ್ ದೀಪದ ವಿಶೇಷ: ಪುಷ್ಟಗಿರಿ ಬೆಟ್ಟದಲ್ಲಿ ಒಂದು ಟಿನ್ ಎಣ್ಣೆ ಹಾಕಿ, ಪಂಚೆಯನ್ನು ಬತ್ತಿಯನ್ನಾಗಿ ಮಾಡಿ ದೀಪ ಬೆಳಗಿಸುವುದು ಇಲ್ಲಿ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ಈ ದೀಪವು ಪರಿಸರ ಶುಭ್ರವಾಗಿದ್ದರೆ ಸೋಮವಾರಪೇಟೆ ಪಟ್ಟಣದವರೆಗೂ ಕಾಣಬಹುದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.