ADVERTISEMENT

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ

ಕುಶಾಲನಗರ ಎಪಿಸಿಎಂಎಸ್‌ಸಿ ಚುನಾವಣೆ; ಎಚ್.ಬಿ.ಚಂದ್ರಪ್ಪ ಜಯಭೇರಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:01 IST
Last Updated 1 ನವೆಂಬರ್ 2025, 5:01 IST
ಕುಶಾಲನಗರ ತಾಲ್ಲೂಕಿನ ಎಪಿಸಿಎಂಸ್‌ಸಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿ ಮೇಲುಗೈ ಸಾಧಿಸಿದರು
ಕುಶಾಲನಗರ ತಾಲ್ಲೂಕಿನ ಎಪಿಸಿಎಂಸ್‌ಸಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿ ಮೇಲುಗೈ ಸಾಧಿಸಿದರು   

ಕುಶಾಲನಗರ: ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಚ್.ಬಿ‌.ಚಂದ್ರಪ್ಪ ಜಯಭೇರಿ ಬಾರಿಸಿದ್ದಾರೆ.

ಇಲ್ಲಿನ ಎಪಿಸಿಎಂಎಸ್‌ಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸಂಘದ ಕುಶಾಲನಗರ, ನಂಜರಾಯಪಟ್ಟಣ ಹಾಗೂ ಹೆಬ್ಬಾಲೆ ವಿಭಾಗದಿಂದ ಒಟ್ಟು 12 ನಿರ್ದೇಶಕರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಹೆಬ್ಬಾಲೆ ವಿಭಾಗದಿಂದ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಚ್.ಬಿ.ಚಂದ್ರಪ್ಪ 370 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಜಿ.ಕುಮಾರಸ್ವಾಮಿ 213 ಹಾಗೂ ಸುಂದರ್‌ಗೆ 125 ಮತಗಳು ಲಭಿಸಿ, ಸೋಲುಂಡರು.

ಹಿಂದುಳಿದ ವರ್ಗ(ಬಿಸಿಎಂಎ) ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಚ್.ಎನ್. ಮಹಾದೇವ 382 ಮತ ಪಡೆದು ಗೆದ್ದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಚ್.ಟಿ.ದಿನೇಶ್‌ಗೆ 333 ಮತಗಳು ಲಭಿಸಿ, ಪರಾಜಿತಗೊಂಡರು.

ADVERTISEMENT

ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಚ್.ಟಿ.ಚಂದ್ರಕಲಾ 396 ಮತ ಪಡೆದು ಚುನಾಯಿತರಾದರು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಟಿ.ಎಲ್.ಗಂಗಮ್ಮ 321 ಮತ ಪಡೆದು ಪರಾಭವಗೊಂಡರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಶರತ್ ಕುಮಾರ್ ಜಯ ಗಳಿಸಿದ್ದಾರೆ. ಕುಶಾಲನಗರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಲ್ಲಿಕಾರ್ಜುನ 154 ಮತ ಪಡೆದು ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ, ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಜೇಶ್ 134 ಹಾಗೂ ಕಾಶಿ 122 ಮತ ಪಡೆದರು. 

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಂದಕುಮಾರ್ 239 ಮತ ಪಡೆದು, ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ (170 ಮತ) ವಿರುದ್ಧ ಜಯಗಳಿಸಿದ್ದಾರೆ.

ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಾರ್ವತಿ 247 ಮತ ಪಡೆದು, ಪ್ರತಿಸ್ಪರ್ಧಿಗಳಾದ
ಅನುಪಮ 75 ಹಾಗೂ ನೀಲಾವೇಣಿ 97 ವಿರುದ್ಧ ಜಯಗಳಿಸಿದ್ದಾರೆ.

ಸುಂಟಿಕೊಪ್ಪ ವಿಭಾಗದಿಂದ ಎ.ತರಗತಿ ಕ್ಷೇತ್ರದಿಂದ ಎಂ.ಎನ್.ಕುಮಾರಪ್ಪ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಡಿ.ಕೆ.ಗಂಗಾಧರ್ ಹಾಗೂ ಸಾಮಾನ್ಯ ಕ್ಷೇತ್ರದಿಂದ ಎನ್.ಸಿ.ಪೊನ್ನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ, ಸಹಾಯಕ ಅಧಿಕಾರಿಗಳಾಗಿ ಲೋಹಿತ್, ಸಿಇಓ ಜಗದೀಶ್ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.