ADVERTISEMENT

ಉಕ್ಕಿ ಹರಿಯುತ್ತಿದ್ದ ನದಿ ಮಧ್ಯೆ ಸಿಲುಕಿದ ದೋಣಿ; ರಕ್ಷಣೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 9:58 IST
Last Updated 9 ಜುಲೈ 2022, 9:58 IST
ಉಕ್ಕಿ ಹರಿಯುತ್ತಿದ್ದ ನದಿ ಮಧ್ಯೆ ಸಿಲುಕಿದ ದೋಣಿ; ರಕ್ಷಣೆ
ಉಕ್ಕಿ ಹರಿಯುತ್ತಿದ್ದ ನದಿ ಮಧ್ಯೆ ಸಿಲುಕಿದ ದೋಣಿ; ರಕ್ಷಣೆ   

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣದಿಂದ ದುಬಾರೆ ಹಾಡಿಗೆ ಹೋಗುತ್ತಿದ್ದ ಯಾಂತ್ರಿಕ ದೋಣಿಯೊಂದು ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಯ ಮಧ್ಯೆ ಶನಿವಾರ ಕೆಟ್ಟು ನಿಂತು ಆತಂಕ ಸೃಷ್ಟಿಸಿತು. ದೋಣಿಯಲ್ಲಿ ಸುಮಾರು 8 ಮಂದಿ ಇದ್ದರು.

ದೋಣಿ ನಡೆಸುತ್ತಿದ್ದವರು ಮರದ ಕೊಂಬೆಯೊಂದನ್ನು ಹಿಡಿದು ಸುಮಾರು ಅರ್ಧಗಂಟೆಗಳ ಕಾಲ ನಿಂತಿದ್ದರು. ನಂತರ, ಮತ್ತೊಂದು ದೋಣಿಯ ಮೂಲಕ ಸಿಲುಕಿದ್ದವರನ್ನು ರಕ್ಷಿಸಲಾಯಿತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉಪವಲಯ ಅರಣ್ಯಾಧಿಕಾರಿ ರಂಜನ್, ‘ದೋಣಿಯ ಚಕ್ರಕ್ಕೆ ಬಲೆ ಸಿಲುಕಿದ್ದರಿಂದ ಸಮಸ್ಯೆಯಾಗಿತ್ತು. ಕೂಡಲೇ ಎಲ್ಲರನ್ನೂ ರಕ್ಷಿಸಲಾಯಿತು. ಯಾವುದೇ ಅವಘಡ ಸಂಭವಿಸಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.