ADVERTISEMENT

ಕಾರು ಚಾಲಕ ಲಾಡ್ಜ್‌ನಲ್ಲಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 14:06 IST
Last Updated 4 ಜನವರಿ 2020, 14:06 IST
ದಕ್ಷತ್
ದಕ್ಷತ್   

ಮಡಿಕೇರಿ: ನಗರದ ಕೊಹಿನೂರು ರಸ್ತೆಯ ಪೋರ್ಟ್‌ ವ್ಯೂ ಲಾಡ್ಜ್‌ನಲ್ಲಿ ಶನಿವಾರಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಕಗೋಡ್ಲು ನಿವಾಸಿ ದಕ್ಷತ್ (28) ನೇಣಿಗೆ ಶರಣಾದವರು. ಲಾಡ್ಜ್‌ನಲ್ಲಿ ರೂಮ್‌ ಪಡೆದು ನೇಣಿಗೆ ಶರಣಾಗಿದ್ದಾರೆ.

ಶನಿವಾರ ಬೆಳಿಗ್ಗೆಯಿಂದಲೂ ಕೊಠಡಿಯಿಂದ ದಕ್ಷತ್ ಹೊರಬರದ ಹಿನ್ನೆಲೆಯಲ್ಲಿ ಲಾಡ್ಜ್‌ ಸಿಬ್ಬಂದಿ ಕಿಟಕಿ ಮೂಲಕ ವೀಕ್ಷಣೆ ಮಾಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

ADVERTISEMENT

ತನ್ನ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ತಂದೆ ತಾಯಿ ಫೋಟೊ ಹಾಕಿಕೊಂಡು 'ಸಾರಿ ಡ್ಯಾಡಿ ಅಮ್ಮ'ಎಂದು ಬರೆದುಕೊಂಡಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.