
ಮಡಿಕೇರಿ: ಭತ್ತದ ಹೊಟ್ಟಿನ ಚೀಲದೊಂದಿಗೆ ಬೀಟೆ ಮರಗಳನ್ನು ವಾಹನದಲ್ಲಿ ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಚಾಲಕ ಬಿ.ಎಂ.ಸಜನ್ ಎಂಬಾತನನ್ನು ಸಂಪಾಜೆ ವಲಯದ ಅರಣ್ಯಾಧಿಕಾರಿಗಳ ತಂಡ ಗುರುವಾರ ಬಂಧಿಸಿದೆ.
‘ಅರಣ್ಯಾಧಿಕಾರಿಗಳ ತಂಡವು ಮಡಿಕೇರಿ ಕಡೆಯಿಂದ ಬರುವ ವಾಹನಗಳನ್ನು ಸಂಪಾಜೆ ಸಮೀಪ ತಪಾಸಣೆ ಮಾಡುತ್ತಿದ್ದ ವೇಳೆ ಸರಕು ಸಾಗಣೆ ವಾಹನವೊಂದನ್ನು ತಡೆದು ತಪಾಸಣೆ ನಡೆಸಲಾಯಿತು. ಅದರಲ್ಲಿದ್ದ ಭತ್ತದ ಹೊಟ್ಟಿನ ಚೀಲವನ್ನು ತೆಗೆದಾಗ ಅದರಡಿ ಬೀಟೆ ಮರಗಳ 25 ನಾಟಗಳು ಸಿಕ್ಕವು. ಕೂಡಲೇ ಚಾಲಕ ಸಜನ್ ಎಂಬಾತನನ್ನು ಬಂಧಿಸಲಾಯಿತು. ಆದರೆ, ಮತ್ತೊಬ್ಬ ಆರೋಪಿ ಅಬ್ದುಲ್ ಅಬ್ಬುಟ್ಟಿ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಡಿಸಿಎಫ್ ಅಭಿಷೇಕ್, ಎಸಿಎಫ್ ಸೆಂಥಿಲ್‌ಕುಮಾರ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯಾಧಿಕಾರಿ ಸಂದೀಪ್ ಗೌಡ, ಗಸ್ತು ಅರಣ್ಯ ಪಾಲಕ ಡಿ.ಕಾರ್ತೀಕ್, ಡಿ.ನಾಗರಾಜ್, ಎಸ್.ಸಿದ್ದರಾಮ ನಾಟಿಕರ್, ಸಿಬ್ಬಂದಿ ಭುವನೇಶ್ವರ ಕಾರ್ಯಾಚರಣೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.