
ಪ್ರಜಾವಾಣಿ ವಾರ್ತೆಶನಿವಾರಸಂತೆ: ಇಲ್ಲಿಗೆ ಸಮೀಪದ ಮಾಲಂಬಿ-ಕಣಿವೆಬಸವನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯದಲ್ಲಿ ಸೆಸ್ಕ್ ಸಿಬ್ಬಂದಿ ತೊಡಗಿದ್ದ ವೇಳೆಯೇ ಬೃಹತ್ ಗಾತ್ರದ ಮರವೊಂದು ಸಮೀಪದಲ್ಲೆ ಬಿದ್ದಿದೆ. ಸಿಬ್ಬಂದಿ ಸ್ವಲ್ಪದರಲ್ಲೇ ಅಪಾಯದಿಂದ ಅವರು ಪಾರಾದರು. ಮರ ಬಿದ್ದಿದ್ದರಿಂದ ಕಾಫಿ ಬೆಳೆಗಾರ ಎನ್.ಬಿ.ನಾಗಪ್ಪ ಎಂಬುವವರ ಮನೆ ಮುಂಭಾಗದ ತಡೆಗೋಡೆ ಮತ್ತು ಕೊಟ್ಟಿಗೆ ಜಖಂಗೊಂಡಿತು. ಜೊತೆಗೆ ಸೆಸ್ಕ್ ಸಿಬ್ಬಂದಿಯ ಕಾರೊಂದು ಹಾನಿಗೀಡಾಯಿತು.
ಮಧ್ಯಾಹ್ನದವರೆಗೆ ಗೆ ಶನಿವಾರಸಂತೆ-ಕುಶಾಲನಗರ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಇದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.