ADVERTISEMENT

ಪಂಚವಾರ್ಷಿಕ ಬಜೆಟ್‌ಗೆ ಕಾಫಿ ಮಂಡಳಿ ಸಿದ್ಧತೆ: ದುಪ್ಪಟ್ಟು ಹಣಕ್ಕೆ ಬೇಡಿಕೆ

ಕೆ.ಎಸ್.ಗಿರೀಶ್
Published 15 ಜನವರಿ 2026, 4:06 IST
Last Updated 15 ಜನವರಿ 2026, 4:06 IST
<div class="paragraphs"><p>ನಗರದಲ್ಲಿ ಶುಕ್ರವಾರ ಭಾರತೀಯ ಕಾಫಿ ಮಂಡಳಿಯು ಮತ್ತು ಕಾಫಿ ಬೆಳೆಗಾರರ ಸಂಘಗಳು ಜಂಟಿಯಾಗಿ ಆಯೋಜಿಸಿರುವ ಮೂರು ದಿನಗಳ ‘ಭಾರತ–ಅಂತರರಾಷ್ಟ್ರೀಯ ಕಾಫಿ ಉತ್ಸವ–2025’ರಲ್ಲಿ ಇಡಲಾಗಿದ್ದ ವಿಶೇಷ ‘ವೈನ್‌ ಕಾಫಿ’ ಬೀಜ ಪ್ರಜಾವಾಣಿ ಚಿತ್ರ</p></div>

ನಗರದಲ್ಲಿ ಶುಕ್ರವಾರ ಭಾರತೀಯ ಕಾಫಿ ಮಂಡಳಿಯು ಮತ್ತು ಕಾಫಿ ಬೆಳೆಗಾರರ ಸಂಘಗಳು ಜಂಟಿಯಾಗಿ ಆಯೋಜಿಸಿರುವ ಮೂರು ದಿನಗಳ ‘ಭಾರತ–ಅಂತರರಾಷ್ಟ್ರೀಯ ಕಾಫಿ ಉತ್ಸವ–2025’ರಲ್ಲಿ ಇಡಲಾಗಿದ್ದ ವಿಶೇಷ ‘ವೈನ್‌ ಕಾಫಿ’ ಬೀಜ ಪ್ರಜಾವಾಣಿ ಚಿತ್ರ

   

ಮಡಿಕೇರಿ: ಒಂದೆಡೆ ಕೇಂದ್ರ ಸರ್ಕಾರ ತನ್ನ ವಾರ್ಷಿಕ ಬಜೆಟ್‌ಗೆ ತಯಾರಿ ನಡೆಸುತ್ತಿದ್ದರೆ, ಮತ್ತೊಂದೆಡೆ ಕಾಫಿ ಮಂಡಳಿಯು ತನ್ನ ಪಂಚವಾರ್ಷಿಕ ಬಜೆಟ್‌ಗೆ ಭರದ ಸಿದ್ಧತೆ ನಡೆಸಿದೆ. ಈಗಾಗಲೇ ಹಲವು ಸುತ್ತಿನ ಚರ್ಚೆ, ಸಮಾಲೋಚನೆಗಳು ನಡೆದಿದ್ದು, ಕರಡು ಸಹ ಸಿದ್ಧವಾಗುವ ಹಂತದಲ್ಲಿದೆ. ಈ ಬಾರಿ ಕಾಫಿ ಮಂಡಳಿ ಕಳೆದ ಬಾರಿಗಂತ ದುಪ್ಪಟ್ಟು ಹಣ ಕೇಳಲು ತೀರ್ಮಾನಿಸಿದೆ.

ಸಾಮಾನ್ಯವಾಗಿ ಕಾಫಿ ಮಂಡಳಿ ಸೇರಿದಂತೆ ಇನ್ನಿತರ ಮಂಡಳಿಗಳು 5 ವರ್ಷದ ಕ್ರಿಯಾಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತವೆ. ನಂತರ, ಸಚಿವ ಸಂಪುಟವು ಅನುಮೋದನೆ ನೀಡಿ, ಬಳಿಕ ಸಂಸತ್ ಒಪ್ಪಿಗೆ ಸೂಚಿಸಲಿದೆ. ಈ ವರ್ಷ ಕಳೆದ 5 ವರ್ಷಗಳ ಅವಧಿ ಮುಗಿದಿದೆ. 2026ರಿಂದ 2031ರವರೆಗಿನ ಅವಧಿಯ ಯೋಜನೆಗಾಗಿ ಕಾಫಿ ಮಂಡಳಿ ಸಿದ್ಧತೆಯಲ್ಲಿ ತೊಡಗಿದೆ.

ADVERTISEMENT

‘ಕಳೆದ 5 ವರ್ಷಗಳ ಅವಧಿಗೆಂದು ಕೇಂದ್ರ ಸರ್ಕಾರ ಕಾಫಿ ಮಂಡಳಿಗೆ ₹ 900 ಕೋಟಿಯಷ್ಟು ಹಣ ನೀಡಿತ್ತು. ಎಲ್ಲ ಹಣವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಮುಂದಿನ 5 ವರ್ಷಗಳಿಗೆ ₹ 1600ರಿಂದ 1,700 ಕೋಟಿ ಹಣ ಕೇಳಲು ತೀರ್ಮಾನಿಸಿದ್ದೇವೆ. ಈ ಪಂಚವಾರ್ಷಿಕ ಯೋಜನೆಯ ಕರಡು ತಯಾರಿ ನಡೆಯುತ್ತಿದೆ’ ಎಂದು ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಾರಿ ಕಳೆದ 5 ವರ್ಷಗಳಿಗಿಂತ ತೀರಾ ಭಿನ್ನವಾದ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಮುಖ್ಯವಾಗಿ, ಕಾರ್ಮಿಕರ ಕೊರತೆಗೆ ಪರಿಹಾರ ಕಂಡುಕೊಳ್ಳಲು ಯಾಂತ್ರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಯಾಂತ್ರೀಕರಣವನ್ನು ಕಾಫಿ ಬೆಳೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವುದರಿಂದ ಸಹಜವಾಗಿಯೇ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಹೀಗಾಗಿ, ಪಂಚ ವಾರ್ಷಿಕ ಬಜೆಟ್‌ನಲ್ಲಿ ಯಾಂತ್ರೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದರೊಂದಿಗೆ ಸೂಕ್ತ ಬೆಳೆಗಾರರಿಗೆ ತರಬೇತಿಗಳು, ವಿವಿಧ ಬಗೆಯ ಕೋರ್ಸ್‌ಗಳನ್ನು ಆರಂಭಿಸುವುದು ಸೇರಿದಂತೆ ಅನೇಕ ಹೊಸ ಅಂಶಗಳನ್ನು ಈ ಪಂಚ ವಾರ್ಷಿಕ ಯೋಜನೆಯಲ್ಲಿ ತರಲಾಗುತ್ತಿದೆ. ಹೀಗಾಗಿ, ಹೆಚ್ಚಿನ ಅನುದಾನ ನಿರೀಕ್ಷೆಯಲ್ಲಿ ಕಾಫಿ ಮಂಡಳಿ ಇದೆ.

ನಾಪೋಕ್ಲು ವ್ಯಾಪ್ತಿಯಲ್ಲಿ ಈಚೆಗೆ ಸುರಿದ ಮಳೆಯಿಂದ ಕಾಫಿ ತೋಟ ಹಚ್ಚಹಸಿರಿನಿಂದ ಕೂಡಿದೆ (ಸಂಗ್ರಹ ಚಿತ್ರ)
ತುಂತುರು ನೀರಾವರಿ ಮೂಲಕ ನಾಪೋಕ್ಲು ವ್ಯಾಪ್ತಿಯಲ್ಲಿ ಸಮೃದ್ಧವಾಗಿ ಕಾಫಿ ಹೂ ಅರಳಿರುವುದು
ಕಾಫಿ ಹಣ್ಣು
ಕಾಫಿ ಬೀಜಗಳನ್ನು ಒಣಗಿಸುತ್ತಿರುವುದು
ಕೊಯ್ಲು ಮಾಡಿರುವ ಕಾಫಿ ಹಣ್ಣು
ಎಂ.ಜೆ.ದಿನೇಶ್‌ ಕಾಫಿ ಮಂಡಳಿ ಅಧ್ಯಕ್ಷ.
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ.
ಕಾಫಿ ಮಂಡಳಿಯಿಂದ 2026ರಿಂದ 2031ರವರೆಗಿನ ಪಂಚವಾರ್ಷಿಕ ಯೋಜನೆಗೆ ಸಿದ್ಧತೆಗಳು ಭರದಿಂದ ನಡೆದಿವೆ. ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು
ದಿನೇಶ್ ದೇವವೃಂದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ.
ಕಾಫಿ ಮಂಡಳಿಯ ಪಂಚ ವಾರ್ಷಿಕ ಯೋಜನೆ 2026ರ ಮಾರ್ಚ್‌ಗೆ ಮುಕ್ತಾಯವಾಗಲಿದೆ. ನಂತರ ಏಪ್ರಿಲ್‌ನಿಂದ ಮುಂದಿನ 5 ವರ್ಷಗಳವರೆಗೆ ಪಂಚವಾರ್ಷಿಕ ಬಜೆಟ್‌ಗೆ ಸಿದ್ಧತೆಗಳು ನಡೆದಿವೆ
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.