ADVERTISEMENT

ಚಿಣ್ಣಪ್ಪ ಕುಟುಂಬಕ್ಕೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 13:51 IST
Last Updated 28 ಏಪ್ರಿಲ್ 2025, 13:51 IST
ಕಾಡಾನೆ ದಾಳಿಗೆ ಸಿಲುಕಿ ಮೃತರಾದ ಅವರೇಗುಂದ ನಿವಾಸಿ ಸುಳ್ಯಕೋಡಿ ಚಿಣ್ಣಪ್ಪ ಕುಟುಂಬಕ್ಕೆ ಸರ್ಕಾರದಿಂದ ₹10 ಲಕ್ಷ ಪರಿಹಾರದ ಚೆಕ್‌ ಅನ್ನು ಶಾಸಕ ಪೊನ್ನಣ್ಣ ಸೋಮವಾರ ನೀಡಿದರು
ಕಾಡಾನೆ ದಾಳಿಗೆ ಸಿಲುಕಿ ಮೃತರಾದ ಅವರೇಗುಂದ ನಿವಾಸಿ ಸುಳ್ಯಕೋಡಿ ಚಿಣ್ಣಪ್ಪ ಕುಟುಂಬಕ್ಕೆ ಸರ್ಕಾರದಿಂದ ₹10 ಲಕ್ಷ ಪರಿಹಾರದ ಚೆಕ್‌ ಅನ್ನು ಶಾಸಕ ಪೊನ್ನಣ್ಣ ಸೋಮವಾರ ನೀಡಿದರು   

ಸಿದ್ದಾಪುರ: ಕಾಡಾನೆ ದಾಳಿಗೆ ಸಿಲುಕಿ ಮೃತರಾದ ಅವರೇಗುಂದ ನಿವಾಸಿ, ಕೃಷಿಕ ಸುಳ್ಯಕೋಡಿ ಚಿಣ್ಣಪ್ಪ ಕುಟುಂಬಕ್ಕೆ ಸರ್ಕಾರದಿಂದ ₹10 ಲಕ್ಷ ಪರಿಹಾರದ ಚೆಕ್‌ ಅನ್ನು ಶಾಸಕ ಪೊನ್ನಣ್ಣ ಸೋಮವಾರ ನೀಡಿದರು.

ಅವರೆಗುಂದ ಗ್ರಾಮದ ಚಿಣ್ಣಪ್ಪ ಮನೆಗೆ ಭೇಡಿ ನೀಡಿದ ಪೊನ್ನಣ್ಣ, ಕುಟುಂಬಕ್ಕೆ ಸಾಂತ್ವನ ಹೇಳಿದರು. ‘ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ತುರ್ತು ಪರಿಹಾರವಾಗಿ ₹5 ಲಕ್ಷವನ್ನು ನೀಡಿದ್ದು, ಒಟ್ಟು ₹15 ಲಕ್ಷ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ, ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರತೀಶ್, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.