ADVERTISEMENT

ಗೋಣಿಕೊಪ್ಪಲು: ಕೋವಿಡ್ ಲಸಿಕೆ ಪಡೆದ ಹಾಡಿ ಜನರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 13:53 IST
Last Updated 15 ಸೆಪ್ಟೆಂಬರ್ 2021, 13:53 IST
ಗೋಣಿಕೊಪ್ಪಲು ಬಳಿಯ ನಾಗರಹೊಳೆ ಹಾಡಿ ನಿವಾಸಿಗಳಿಗೆ ಬುಧವಾರ ಕೋವಿಡ್ ಲಸಿಕೆ ನೀಡಲಾಯಿತು
ಗೋಣಿಕೊಪ್ಪಲು ಬಳಿಯ ನಾಗರಹೊಳೆ ಹಾಡಿ ನಿವಾಸಿಗಳಿಗೆ ಬುಧವಾರ ಕೋವಿಡ್ ಲಸಿಕೆ ನೀಡಲಾಯಿತು   

ಗೋಣಿಕೊಪ್ಪಲು: ನಾಗರಹೊಳೆ ಹಾಡಿಯ ಗಿರಿಜನರು ಬುಧವಾರ ಲಸಿಕೆ ಹಾಕಿಸಿಕೊಂಡರು. ಆರೋಗ್ಯ ಕಾರ್ಯಕರ್ತೆಯರ ಸತತ ಮನವೊಲಿಕೆಯಿಂದ ಹಾಡಿಯ 100 ಜನರಿಗೆ ಬುಧವಾರ ಲಸಿಕೆಯ ಮೊದಲ ಡೋಸ್‌ ನೀಡಲಾಯಿತು.

ನಾಲ್ಕೇರಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ನಡೆದ ಲಸಿಕೆ ಅಭಿಯಾನಕ್ಕೆ ಹಾಡಿ ಜನರ ಮನವೊಲಿಸಿ ಕರೆ ತರಲಾಯಿತು.

‘ಎರಡು ತಿಂಗಳಿನಿಂದ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರೂ, ಗಿರಿಜನರು ಭಯಪಟ್ಟು ಹಿಂಜರಿಯುತ್ತಿದ್ದರು. ಆರೋಗ್ಯ ಸೇವಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು ವಿಶ್ವಾಸ ತುಂಬಿದ ಫಲವಾಗಿ ಇದೀಗ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಿರಿಯಪಂಡ ಸಚಿನ್ ಪೆಮ್ಮಯ್ಯ ಹೇಳಿದರು.

ADVERTISEMENT

ಪಿಡಿಒ ಕಾಕೆರ ಕಾಳಪ್ಪ, ನಾಗರಹೊಳೆ ಅರಣ್ಯ ಸಂರಕ್ಷಣಾ ಸಮಿತಿ ಸದಸ್ಯ ಮನುಕುಮಾರ್, ಆರೋಗ್ಯ ಸೇವಾ ಕಾರ್ಯಕರ್ತೆ ರತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.