ADVERTISEMENT

ಕೋವಿಡ್‌: ಮತ್ತೊಬ್ಬ ಸಾವು, 25ಕ್ಕೆ ಏರಿಕೆ

ಜಿಲ್ಲೆಯಲ್ಲಿ 61 ಹೊಸ ಪ್ರಕರಣ ದೃಢ: 51 ಜನ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 2:10 IST
Last Updated 10 ಸೆಪ್ಟೆಂಬರ್ 2020, 2:10 IST

ಮಡಿಕೇರಿ: ಜಿಲ್ಲೆಯಲ್ಲಿ ಬುಧವಾರ ಸೋಂಕಿನ ಪುರುಷರೊಬ್ಬರು ಸಾವನ್ನಪ್ಪಿದ್ದು, ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿದೆ. ಅಲ್ಲದೇ ಒಟ್ಟು 61 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಹೋಬಳಿಯ ರಂಗಸಮುದ್ರ ಗ್ರಾಮದ ಕಬ್ಬಿನಗದ್ದೆ ನಿವಾಸಿ 48 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಇವರು ಉಸಿರಾಟದ ತೊಂದರೆಯಿಂದ ಅವರು ಬಳಲುತ್ತಿದ್ದರಿಂದ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಪರೀಕ್ಷೆ ನಡೆಸಿದಾಗ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಮಡಿಕೇರಿ ಸಂಪಿಗೆಕಟ್ಟೆಯ ಅಂಗನವಾಡಿ ಬಳಿಯ 32 ವರ್ಷದ ಪುರುಷ, ಕುಶಾಲನಗರ ಶಿರಂಗಾಲದ ಮುರ್ಲು ಕೊಪ್ಪಲುವಿನ 65 ವರ್ಷದ ಪುರುಷ, ಮಡಿಕೇರಿ ಗೌಳಿ ಬೀದಿಯ ಕಂಚಿ ಕಾಮಾಕ್ಷಿ ದೇವಾಲಯ ಬಳಿಯ 25 ವರ್ಷದ ಪುರುಷ, ನಾಪೋಕ್ಲು ಕೆನರಾ ಬ್ಯಾಂಕ್ ಸಮೀಪದ 25 ವರ್ಷದ ಪುರುಷ, ಬಲ್ಲಮಾವಟಿ ಪಂಚಾಯಿತಿ ಸಮೀಪದ 47 ವರ್ಷದ ಮಹಿಳೆ, ಮಡಿಕೇರಿ ಚೆಯ್ಯಂಡಾಣೆ ಅಂಚೆಯ ನರಿಯಂದಡ ಗ್ರಾಮದ 55 ವರ್ಷದ ಮಹಿಳೆ, ಕುಶಾಲನಗರ ಗುಮ್ಮನಕೊಲ್ಲಿಯ 38 ವರ್ಷದ ಮಹಿಳೆ, ಕುಶಾಲನಗರ ಗೋಪಾಲ್ ವೃತ್ತ ಬಳಿಯ 46 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.‌

ADVERTISEMENT

ಮಡಿಕೇರಿ ಕಾವೇರಿ ಹಾಲ್ ಬಳಿಯ ಪ್ರಕೃತಿ ಬಡಾವಣೆಯ 24 ಮತ್ತು 55 ವರ್ಷದ ಮಹಿಳೆ, ಮಡಿಕೇರಿ ಪೆನ್‌ಷನ್ ಲೈನ್‌ನ 24 ವರ್ಷದ ಮಹಿಳೆ ಮತ್ತು 50 ವರ್ಷದ ಪುರುಷ, ಮಡಿಕೇರಿ ಕಾವೇರಿ ಲೇಔಟ್‌ನ 56 ವರ್ಷದ ಪುರುಷ, ಮಡಿಕೇರಿ ಎಮ್ಮೆಮಾಡು ಗ್ರಾಮದ ಪ್ರಾಥಮಿಕ ಶಾಲೆ ಬಳಿಯ 49 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.

ಸೋಮವಾರಪೇಟೆ ಕಿರಗಂದೂರಿನ ಬಗಲ್ ಕಂಡಿಯ 61 ವರ್ಷದ ಪುರುಷ, ಮಡಿಕೇರಿ ಚೆಟ್ಟಿಮಾನಿ ಅಂಚೆಯ ಕುಂದಚೇರಿ ಗ್ರಾಮದ 84 ವರ್ಷದ ಮಹಿಳೆ, ವಿರಾಜಪೇಟೆ ನೆಹರೂ ನಗರದ ಅಂಗನವಾಡಿ ಬಳಿಯ 65 ವರ್ಷದ ಪುರುಷ, ಮಡಿಕೇರಿ ಮಹೀಂದ್ರಾ ಕ್ಲಬ್‌ನ 27 ವರ್ಷದ ಪುರುಷ, ಕುಶಾಲನಗರ ಬೈಚನಹಳ್ಳಿಯ ಅಂಬೇಡ್ಕರ್ ಕಾಲೊನಿಯ 28 ವರ್ಷದ ಮಹಿಳೆ, ವಿರಾಜಪೇಟೆ ಗೋಣಿಕೊಪ್ಪದ ಎಚ್.ಸಿ ಪುರ ಜೆ.ಬಿ ಕಾಂಪ್ಲೆಕ್ಸ್‌ನ 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1,826 ಆಗಿದ್ದು, 51 ಜನ ಗುಣಮುಖರಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 1,471, 331 ಸಕ್ರಿಯ ಪ್ರಕರಣಗಳಿದ್ದು, 25 ಸಾವು ವರದಿಯಾಗಿವೆ. ಜಿಲ್ಲೆಯಲ್ಲಿ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 320 ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.