ADVERTISEMENT

ಪೊನ್ನಂಪೇಟೆ - ಕುಟ್ಟ ರಸ್ತೆಯಲ್ಲಿ ಬಿರುಕು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 16:31 IST
Last Updated 10 ಆಗಸ್ಟ್ 2022, 16:31 IST
   

ಮಡಿಕೇರಿ: ಮದೆನಾಡು ಸಮೀಪ ಬಿರುಕು ಬಿಟ್ಟ ಗುಡ್ಡದ ಮಗ್ಗುಲಿನ ಮಡಿಕೇರಿ–ಮಂಗಳೂರು ರಸ್ತೆಯ ಮತ್ತೊಂದು ಪಾರ್ಶ್ವದ ತಡೆಗೋಡೆಯವರೆಗೆ ರಸ್ತೆ ಅಭಿವೃದ್ಧಿ ಕಾರ್ಯವನ್ನು ಬುಧವಾರ ರಾತ್ರಿ ನಡೆಸಲಾಗಿದೆ.

ಗುಡ್ಡದ ಮಣ್ಣನ್ನು ತೆರವುಗೊಳಿಸಬೇಕೇ, ಬೇಡವೇ, ತೆರವುಗೊಳಿಸುವುದರಿಂದ ಆಗುವ ಪರಿಣಾಮಗಳನ್ನು ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇರಿದಂತೆ ಯಾರಲ್ಲೂ ಖಚಿತ ಅಭಿಪ್ರಾಯಗಳಿಲ್ಲ. ಹಾಗಾಗಿ, ತಜ್ಞರ ಸಲಹೆ ಇಲ್ಲದೇ ತರಾತುರಿಯಲ್ಲಿ ಗುಡ್ಡದ ಮಣ್ಣನ್ನು ತೆರವುಗೊಳಿಸುವುದು ಬೇಡ ಎಂಬ ತೀರ್ಮಾನಕ್ಕೆ ಜಿಲ್ಲಾಡಳಿತ ಬಂದಿದೆ.

ಒಂದು ವೇಳೆ ಗುಡ್ಡದಿಂದ ಮಣ್ಣು ಕುಸಿದರೂ ವಾಹನಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಸ್ತೆಯ ತಡೆಗೋಡೆಯವರೆಗೂ ಇರುವ ಜಾಗವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.