
ಗೋಣಿಕೊಪ್ಪಲು: ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಭಿನ್ನವಾದ ವಿಚಾರಗೋಷ್ಠಿಗಳು, ಸಾಧಕ ಹಿರಿಯರಿಗೆ ವಾರ್ಷಿಕ ಪ್ರಶಸ್ತಿಯ ಗೌರವ ಹೀಗೆ ಈ ಎಲ್ಲ ಕಾರ್ಯಕ್ರಮಗಳು ಒಟ್ಟಿಗೆ ಮುಪ್ಪುರಿಗೊಂಡಿದ್ದು ಇಲ್ಲಿನ ಗಡಿ ಗ್ರಾಮ ಕುಟ್ಟದಲ್ಲಿ.
ಇಲ್ಲಿನ ಶನಿವಾರ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಇಡೀ ದಿನ ಕಲಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು.
ಶ್ರೀ ಮಂದತವ್ವ ಸಾಂಸ್ಕೃತಿಕ ತಂಡ ಬೆಕ್ಕೆಸೊಡ್ಲೂರು ಸುಳ್ಳಿಮಡ ಶಾಮಲ ಮತ್ತು ತಂಡದವರ ಗೆಜ್ಜೆತಂಡ್ ನೃತ್ಯ, ಮೈಸೂರಿನ ಪೊಂಬೊಳಕ್ ಕೊಡವ ಕೂಟದವರಿಂದ ಕೋಲಾಟ್ ಮತ್ತು ಸಮೂಹ ನೃತ್ಯ, ಕುಡಿಯರ ಗೋಪಮ್ಮ ಮತ್ತು ತಂಡದವರಿಂದ ಉರ್‍ಟಿಕೊಟ್ ನೃತ್ಯ, ಕುಟ್ಟ ಕೊಡವ ಸಮಾಜ ಪೊಮ್ಮಕ್ಕಡ ಕೂಟದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೀಕಚಂಡ ಪುಟ್ಟ ಬೆಳ್ಯಪ್ಪನವರಿಂದ ಎತ್ತ್‍ತೆರೆ, ಕಾಪಾಳ ತಂಡ, ದುಡಿಕೊಟ್ಟ್ ಪಾಟ್, ಶ್ರೀಮಂಗಲ ಪೊಮ್ಮಕ್ಕಡ ಕೂಟದವರಿಂದ ಸಾಂಸ್ಕೃತಿಕ ನೃತ್ಯ, ಟಿ.ಶೆಟ್ಟಿಗೇರಿ ಸಂಭ್ರಮ ಪೊಮ್ಮಕ್ಕ ತಂಡ ಹಾಗೂ ಇತರೆ ಸಂಘ-ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೊಡವ ಭಾಷಿಕ ಸಂಸ್ಕೃತಿ ಮತ್ತು ಕಲೆಗಳ ಅನಾವರಣ ಆಕರ್ಷಣೀಯವಾಗಿತ್ತು.
ಕವಿಗಳಾದ ಪುತ್ತಾಮನೆ ವಿದ್ಯಾ ಜಗದೀಶ್, ವೈಲೇಶ್ ಪಿ.ಎಸ್, ಉಳುವಂಗಡ ಕಾವೇರಿ ಉದಯ ಹಾಗೂ ಅಜ್ಜಿಕುಟ್ಟಿರ ಭವ್ಯ ಬೋಪಣ್ಣ ಕವನ ವಾಚನ ಮಾಡಿದರು. ಕೊಡವೋಲೆ ಮತ್ತು ಕಂಬೆಯಂಡ ಅಕ್ಷರ ಬೋಜಣ್ಣ ಅವರು ಬರೆದಿರುವ ಪುಸ್ತಕ ಬಿಡುಗಡೆ ಗೊಳಿಸಲಾಯಿತು.
ಕೊಡವ ಭಾಷಿಕ ವಿವಿಧ ಸಂಘ-ಸಂಸ್ಥೆ-ಸಮಾಜಗಳಿಗೆ ದುಡಿ, ತಾಳ, ಕೋಲ್, ಕೊಂಬು, ಧೋಳ್ ನೀಡಲಾಯಿತು.
14 ಮಂದಿಗೆ ಪ್ರಶಸ್ತಿ ಪ್ರದಾನ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2026ನೇ ಸಾಲಿನ ಗೌರವ ಪ್ರಶಸ್ತಿಯನ್ನು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು 14 ಮಂದಿಗೆ ಪ್ರದಾನ ಮಾಡಿದರು. ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಮಲ್ಲೇಂಗಡ ದಾದ ಬೆಳ್ಯಪ್ಪ(ಸಮಾಜ ಸೇವೆ), ಚೆಪ್ಪುಡಿರ ತಿಲಕ್ ಸುಬ್ಬಯ್ಯ(ಸಮಾಜ-ಸಂಸ್ಕೃತಿ), ತೀತಮಾಡ ಅರ್ಜುನ್ ದೇವಯ್ಯ(ವ್ಯಕ್ತಿತ್ವ-ಸಮಾಜ ಕ್ಷೇತ್ರ), ಉದಿಯಂಡ ರೋಷನ್ ಸೋಮಣ್ಣ (ಸಾಹಿತ್ಯ-ಸಮಾಜ ಕ್ಷೇತ್ರ), ಚೆನಿಯಪಂಡ ಮನು ಮಂದಣ್ಣ(ಸಾಹಿತ್ಯ-ಸಂಸ್ಕೃತಿ), ಚೊಟ್ಟೆಯಂಡ ಅಪ್ಪಾಜಿ (ಸಂಸ್ಕೃತಿ), ಕಣಿಯರ ನಾಣಯ್ಯ (ಜಾನಪದ ), ಚಮ್ಮಣಮಡ ವಾಣಿ ರಾಘವೇಂದ್ರ (ಸಾಹಿತ್ಯ), ಕುಡಿಯರ ಕೆ. ಚಿಣ್ಣಪ್ಪ (ಜಾನಪದ), ಸುಳ್ಳಿಮಡ ಗೌರಿ ನಂಜಪ್ಪ (ಜಾನಪದ), ಚೋಕಂಡ ಸಂಜು ಸುಬ್ಬಯ್ಯ (ಸಮಾಜ ಸೇವೆ), ಐಮಂಡ ರೂಪೇಶ್ ನಾಣಯ್ಯ (ಕಲಾಸೇವೆ), ಕಾಳೆಕುಟ್ಟಡ ಬೋಜಣ್ಣ (ಸಂಸ್ಕೃತಿ), ಕೊರಕುಟ್ಟಿರ ಸರ ಚಂಗಪ್ಪ (ಸಮಾಜಸೇವೆ) ಪ್ರಶಸ್ತಿ ಸ್ವೀಕರಿಸಿದರು.
ವಿಧಾನ ಪರಿಷತ್ ಸದಸ್ಯ ಸುಜ ಕುಶಾಲಪ್ಪ, ಮಾಜಿ ಸದಸ್ಯೆ ಶಾಂತೆಯಂಡ ವೀಣ ಅಚ್ಚಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ,ಅಕಾಡೆಮಿ ಅಧ್ಯಕ್ಷ ಅಜ್ನಿಕಂಡ ಮಹೇಶ್ ನಾಚಯ್ಯ, ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ದಾನಿಗಳಾದ ಮುಕ್ಕಾಟೀರ ರಾಜ ಮಂದಣ್ಣ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪೃಥ್ಯು, ಕೊಡವ ಭಾಷಿಕ ಜನಾಂಗ ಒಕ್ಕೂಟದ ಪಿ.ಜಿ.ಅಯ್ಯಪ್ಪ, ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಕೊಡವ ಸಮಾಜದ ಸದಸ್ಯರಾದ ಪುತ್ತರೀರ ತಿಮ್ಮಯ್ಯ, ಕಂಬೆಯಂಡ ಬೋಜಣ್ಣ, ದಿನು ಬೋಜಪ್ಪ, ಕೊಡಿಜಮ್ಮನ ಬಾಲಕೃಷ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ಗಣೇಶ್, ಕುಟ್ಟಪ್ಪ, ಗಗನ್, ನಾಯಂದೀರ ಶಿವಾಜಿ, ಉತ್ತಪ್ಪ, ಮುಖಂಡರಾದ ಪಲ್ವಿನ್ ಪೂಣಚ್ಚ, ತೀತಿರ ಪ್ರಭು, ತೀತಮಾಡ ಅರ್ಜುನ್ ದೇವಯ್ಯ, ಕಾಡ್ಯಾಮಾಡ ಕುಸುಮಾ ಭಾಗವಹಿಸಿದ್ದರು.
‘ಎಲ್ಲರೂ ಕೊಡವ ಪುಸ್ತಕ ಓದಿರಿ’
ಎಲ್ಲರೂ ಕೊಡವ ಭಾಷೆಯ ಪುಸ್ತಕ ಓದಬೇಕು ಪುಸ್ತಕ ಅಧ್ಯಯನದಿಂದ ಸತ್ಯ ತಿಳಿಯಲಿದೆ. ಕೊಡವ ಭಾಷೆಯಲ್ಲಿ ಮತ್ತಷ್ಟು ಪುಸ್ತಕಗಳು ಪ್ರಕಟ ಆಗಬೇಕು ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು. ಕೊಡವ ಭಾಷಿಕರ ಆಚರಣೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಮುಂದಿನ ತಲೆಮಾರಿಗೂ ಉಳಿಸಿ ಬೆಳೆಸುವಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೆಲಸ ಮಾಡಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.