ADVERTISEMENT

ಕುಶಾಲನಗರ | ಗ್ರಾಹಕರ ಮೇಳ: ಪ್ರಚಾರ ಬ್ಯಾನರ್ ಅನಾವರಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 4:39 IST
Last Updated 5 ಆಗಸ್ಟ್ 2025, 4:39 IST
ಕುಶಾಲನಗರದಲ್ಲಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ನಡೆಯಲಿರುವ ಬೃಹತ್ ಗ್ರಾಹಕರ ಮೇಳದ ಪ್ರಚಾರ ಬ್ಯಾನರ್‌ ಅನ್ನು ಸೋಮವಾರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅನಾವರಣಗೊಳಿಸಿದರು
ಕುಶಾಲನಗರದಲ್ಲಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ನಡೆಯಲಿರುವ ಬೃಹತ್ ಗ್ರಾಹಕರ ಮೇಳದ ಪ್ರಚಾರ ಬ್ಯಾನರ್‌ ಅನ್ನು ಸೋಮವಾರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅನಾವರಣಗೊಳಿಸಿದರು   

ಕುಶಾಲನಗರ: ಪಟ್ಟಣದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಸೆ.6 ರಂದು ಇಲ್ಲಿನ ಬೈಚನಹಳ್ಳಿ ಎಸ್.ಎಲ್.ಎನ್. ಟೈಮ್ ಸ್ಕ್ವೇರ್ ಆವರಣದಲ್ಲಿ ನಡೆಯಲಿರುವ ಬೃಹತ್ ಗ್ರಾಹಕರ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಪ್ರಚಾರ ಬ್ಯಾನರ್ ಅನ್ನು ಸೋಮವಾರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅನಾವರಣಗೊಳಿಸಿದರು.

ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ‘ಕುಶಾಲನಗರದಲ್ಲಿ ಪ್ರಥಮ ಬಾರಿಗೆ ಗ್ರಾಹಕ ಮೇಳ ಆಯೋಜಿಸುತ್ತಿದ್ದೇವೆ. ಮೇಳದಲ್ಲಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳು, ಪ್ರತಿಷ್ಠಿತ ಕಂಪನಿಗಳ ಕಾರುಗಳು, ಬೈಕ್‌ಗಳು, ತಿಂಡಿ ತಿನಿಸು, ಡಿಸೈನರ್ ಬಟ್ಟೆಗಳು, ಮನೆಗೆ ಬೇಕಾದ ವಸ್ತುಗಳಿಗೆ ಸಂಬಂಧಿಸಿದ ಮಳಿಗೆಗಳು ಇರಲಿದೆ’ ಎಂದು ಹೇಳಿದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ದಿನೇಶ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಮೇಳಕ್ಕೆ ಶುಭ ಹಾರೈಸಿದರು. ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ, ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ.ಬಾಬು, ನಿರ್ದೇಶಕರಾದ ಕೆ.ಎನ್.ದೇವರಾಜ್, ರಿಚರ್ಡ್ ಡಿಸೋಜ, ಎಚ್.ಎಂ.ಚಂದ್ರು, ಕೆ.ಜೆ.ಸತೀಶ್, ಪಿ.ಎಂ.ಮೋಹನ್, ಪುರಸಭಾ ಸದಸ್ಯರಾದ ಅಮೃತ್ ರಾಜ್, ಸುರೇಶ್ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.