ADVERTISEMENT

ಮತ್ತಿಗೋಡು ಸಾಕಾನೆ ಶಿಬಿರದಿಂದ ವೀರನಹೊಸಳ್ಳಿಗೆ ದಸರಾ ಗಜಪಡೆಯ ಪಯಣ ಆರಂಭ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 12:34 IST
Last Updated 6 ಆಗಸ್ಟ್ 2022, 12:34 IST
   

ಗೋಣಿಕೊಪ್ಪಲು: ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಮತ್ತಿಗೋಡು ಸಾಕಾನೆ ಶಿಬಿರದಿಂದ ಅಂಬಾರಿ ಆನೆಯಾದ ಅಭಿಮನ್ಯು, ಗೋಪಾಲಸ್ವಾಮಿ, ಮಹೇಂದ್ರ, ಭೀಮ ಆನೆಗಳು ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಗೆ ಶನಿವಾರ ಪಯಣ ಬೆಳೆಸಿದವು.

ಆನೆಗಳೊಂದಿಗೆ ಮಾವುತರಾದ ವಸಂತ, ರಾಜು, ವಿನು, ಸೃಜನ್, ಜೆ.ಡಿ.ಮಂಜು, ಮಲ್ಲಿಕಾರ್ಜುನ, ಕಾವಾಡಿಗಳಾದ ರಾಜಣ್ಣ, ಗುಂಡ, ನಂಜುಂಡಸ್ವಾಮಿ ತೆರಳಿದರು.

ಮಾವುತರ ಕುಟುಂಬಸ್ಥರು ಆನೆಗಳನ್ನು ತೊಳೆದು ಶೃಂಗಾರ ಮಾಡಿದ್ದರು. ಆನೆಗಳು ದಸರಾ ಉತ್ಸವಕ್ಕೆ ಹೊರಡುವ ಹಿನ್ನೆಲೆಯಲ್ಲಿ ಮತ್ತಿಗೋಡು ಶಿಬಿರದಲ್ಲಿ ಸಂಭ್ರಮ ನೆಲೆಸಿತ್ತು.

ADVERTISEMENT

ಶಿಬಿರದ ಆರ್‌ಎಫ್ಒ ಗಣರಾಜ್, ಡಿಆರ್‌ಎಫ್‌ಒ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ‌

ಮೂರು ವರ್ಷದಿಂದ ಅಂಬಾರಿ ಹೊರುತ್ತಿರುವ ಅಭಿಮನ್ಯು ಈ ಬಾರಿಯೂ ಜವಾಬ್ದಾರಿ ಹೊರಲು ರಾಜ ಗಾಂಭಿರ್ಯದಿಂದ ಹೆಜ್ಜೆ ಹಾಕಿತು. ಅಭಿಮನ್ಯು ಆನೆಯ ಮಾವುತ ವಸಂತ ಆನೆಗೆ ವಿಶೇಷವಾಗಿ ಅಲಂಕಾರ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.