ADVERTISEMENT

ಶನಿವಾರಸಂತೆ: ಧರ್ಮಸ್ಥಳ ಕುರಿತು ಅಪಪ್ರಚಾರ ವಿರೋಧಿಸಿ ಪ್ರತಿಭಟನೆ

ಶನಿವಾರಸಂತೆ ಪಾದಯಾತ್ರಾ ಸಮಿತಿಯಿಂದ ಮೌನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:47 IST
Last Updated 19 ಆಗಸ್ಟ್ 2025, 2:47 IST
<div class="paragraphs"><p>ಧರ್ಮಸ್ಥಳ ಕುರಿತು ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ&nbsp; ಪಾದಯಾತ್ರೆ ಸಮಿತಿ ಸದಸ್ಯರು ಸೋಮವಾರ ಶನಿವಾರಸಂತೆಯಲ್ಲಿ ಮೌನ ಮೆರವಣಿಗೆ ನಡೆಸಿದರು</p></div>

ಧರ್ಮಸ್ಥಳ ಕುರಿತು ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ  ಪಾದಯಾತ್ರೆ ಸಮಿತಿ ಸದಸ್ಯರು ಸೋಮವಾರ ಶನಿವಾರಸಂತೆಯಲ್ಲಿ ಮೌನ ಮೆರವಣಿಗೆ ನಡೆಸಿದರು

   

ಶನಿವಾರಸಂತೆ: ಧರ್ಮಸ್ಥಳ ಕುರಿತು ಅಪಪ್ರಚಾರ ನಡೆಸಿ ಕ್ಷೇತ್ರಕ್ಕೆ ಕಳಂಕ ತರಲು ಹುನ್ನಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಶನಿವಾರಸಂತೆ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಮೌನ ಮೆರವಣಿಗೆ ನಡೆಸಲಾಯಿತು.

ಗುಡುಗಳಲೆ ಜಂಕ್ಷನ್‍ನಿಂದ ಮುಖ್ಯರಸ್ತೆ ಮೂಲಕ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿಮಂಟಪದವರೆಗೆ ಹೊರಟ ಮೌನ ಮೆರವಣಿಗೆಯಲ್ಲಿ ಪಾದಯಾತ್ರೆ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ADVERTISEMENT

ಪ್ರತಿಭಟನಗಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಎಸ್.ಎನ್.ರಘು, ‘ಕೆಲವರು ನಿರಂತರವಾಗಿ ಹಿಂದೂ ದೇವಾಲಯ ಹಾಗೂ ಹಿಂದೂಪರ ಹೋರಾಟಗಾರರನ್ನು ತುಳಿಯಲು ಪ್ರಯತ್ನ ಪಡುತ್ತಿದ್ದಾರೆ. ಇವರಿಗೆ ಯಾರು ಹಣ ನೀಡುತ್ತಿದ್ದಾರೆ ಮತ್ತು ಇವರನ್ನು ಯಾರು ಬೆಂಬಲಿಸುತ್ತಿದ್ದಾರೆ ಎಂದು ತನಿಖೆ ಆಗಬೇಕು’ ಎಂದು ಹೇಳಿದರು.

ಮುಖಂಡ ಬಿ.ಎಸ್.ಅನಂತ್‍ಕುಮಾರ್, ರಕ್ಷಿತ್ ಮಾತನಾಡಿದರು. ಪ್ರತಿಭಟನೆಯಲ್ಲಿ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿಯ ಮುಖಂಡರಾದ ಮಂಜುನಾಥ್ ಅಪ್ಪಶೆಟ್ಟಳ್ಳಿ, ಪಿ.ಎನ್.ಸುಮಂತ್, ಆರ್.ಸಿ.ಪಾಲಾಕ್ಷ, ಮಹೇಶ್, ಅಭಿಷೇಕ್ ಹಾಲ್ಕೆನೆ, ಪುನಿತ್ ತಾಳೂರು, ಯತೀಶ್, ಬಿ.ಜಿ.ಪೃಥ್ವಿ, ಅಶ್ವಥ್ ಬೆಂಬಳೂರು, ಕಿರಣ್ ಅಪ್ಪಶೆಟ್ಟಳ್ಳಿ, ಪ್ರವೀಣ್, ಪ್ರಭಾಕರ್, ದಿನೇಶ್, ಹೇಮಂತ್  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.