ಮಡಿಕೇರಿ: ‘ನಮ್ಮ ಉಡುಪು ನಮ್ಮ ಹಕ್ಕು’ ಇದನ್ನು ಧರಿಸಲು ಯಾರ ಅಪ್ಪಣೆಯೂ ಬೇಕಿಲ್ಲ. ಅವರವರ ಸಮುದಾಯದ ಸಾಂಪ್ರದಾಯಿಕ ಉಡುಪು ಧರಿಸುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಕಟ್ಟೆಮಾಡು ಗ್ರಾಮದ ಕಳ್ಳೀರ ಹರೀಶ್ ಹೇಳಿದರು.
ಆವರೆಮಾದಂಡ, ನಂದೇಟಿರ, ಪಳಂಗಂಡ ಸೇರಿದಂತೆ ಅನೇಕ ಕೊಡವ ಕುಟುಂಬದವರು ದಾರಿಯನ್ನು ದಾನವಾಗಿ ನೀಡಿದ್ದಾರೆ. ಅವರಿಗೆ ಅವರ ಸಾಂಪ್ರದಾಯಿಕ ಉಡುಪು ಧರಿಸುವುದು ಬೇಡ ಎಂದು ಹೇಳುವುದು ಎಷ್ಟು ಸರಿ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಗ್ರಾಮದ ಸಾದೇರ ರಮೇಶ್ ಮಾತನಾಡಿ, ‘ನಾವು ಅಲ್ಲಿ ಗಲಾಟೆ ಮಾಡಿಲ್ಲ. ನಮ್ಮ ಉಡುಪು ಧರಿಸಿ ಹೋದ ನಮ್ಮನ್ನು ತಡೆದಿದ್ದು ಅವರೇ. ಗಲಾಟೆಗೆ ಈ ಬಗೆಯಲ್ಲಿ ತಡೆದಿದ್ದೇ ಕಾರಣ’ ಎಂದು ಅವರು ಪ್ರತಿಪಾದಿಸಿದರು.
‘ನಮ್ಮ ಸಾಂಪ್ರದಾಯಿಕ ಉಡುಪು ಧರಿಸಿ ದೇಗುಲದಲ್ಲಿ ಪೂಜೆ ಸಲ್ಲಿಸುವ ಅವಕಾಶ ನೀಡಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕಳ್ಳೀರ ಬೋಸ್ ಲವಪ್ಪ, ಚಂಗಣಮಕ್ಕಡ ವಿನು ಅಪ್ಪಯ್ಯ, ಪರಿಯಪ್ಪಮ್ಮನ ಮಹೇಶ್ ಒಕ್ಕೊರಲಿನಿಂದ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.