ADVERTISEMENT

ಡ್ರ್ಯಾಗನ್ ಹಣ್ಣು ಸೇವನೆಯಿಂದ ಆರೋಗ್ಯ ವೃದ್ಧಿ: ಮಂಜುನಾಥ ಜೆ ಶಟ್ಟಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2023, 4:54 IST
Last Updated 20 ಜೂನ್ 2023, 4:54 IST
ಶನಿವಾರಸಂತೆ ಪಟ್ಟಣದ ಯುವ ರೈತ ನಂದಕುಮಾರ್ ನಿವಾಸದಲ್ಲಿ ತಾರಸಿ ಮೇಲೆ ಬೆಳೆದಿರುವ ಡ್ರ್ಯಾಗನ್ ಹಣ್ಣಿನ ಕೃಷಿಯ ಕುರಿತ ಕ್ಷೇತ್ರೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು. ಸೋಮವಾರಪೇಟೆ ತಾಲ್ಲೂಕಿನ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಜೆ ಶಟ್ಟಿ ಇದ್ದಾರೆ
ಶನಿವಾರಸಂತೆ ಪಟ್ಟಣದ ಯುವ ರೈತ ನಂದಕುಮಾರ್ ನಿವಾಸದಲ್ಲಿ ತಾರಸಿ ಮೇಲೆ ಬೆಳೆದಿರುವ ಡ್ರ್ಯಾಗನ್ ಹಣ್ಣಿನ ಕೃಷಿಯ ಕುರಿತ ಕ್ಷೇತ್ರೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು. ಸೋಮವಾರಪೇಟೆ ತಾಲ್ಲೂಕಿನ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಜೆ ಶಟ್ಟಿ ಇದ್ದಾರೆ   

ಶನಿವಾರಸಂತೆ: ಡ್ರ್ಯಾಗನ್ ಹಣ್ಣನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅದಕ್ಕಾಗಿಯೇ ಈ ಹಣ್ಣಿನ ಬೇಡಿಕೆ ಹೆಚ್ಚಾಗಿದೆ ಎಂದು ಸೋಮವಾರಪೇಟೆ ತಾಲ್ಲೂಕಿನ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಜೆ ಶಟ್ಟಿ ತಿಳಿಸಿದರು.

ಅವರು ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಯುವ ರೈತ ನಂದ ಕುಮಾರ್ ನಿವಾಸದಲ್ಲಿ ತಾರಸಿ ಮೇಲೆ ಬೆಳೆದಿರುವ ಡ್ರ್ಯಾಗನ್ ಹಣ್ಣಿನ ಕೃಷಿಯ ಕುರಿತ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರಿಗೆ ಡ್ರ್ಯಾಗನ್ ಹಣ್ಣಿನ ಉಪಯೋಗಗಳು, ಬೇಸಾಯ ಕ್ರಮಗಳು, ಪೋಷಕಾಂಶ ನಿರ್ವಹಣೆ, ರೋಗ ಮತ್ತು ಕೀಟ ನಿರ್ವಹಣೆ, ಮಾರುಕಟ್ಟೆ ಪ್ರಕ್ರಿಯೆ, ನಾಟಿ ಮಾಡಲು ಗಿಡಗಳ ಆಯ್ಕೆ ಹಾಗೂ ರೈತರು ತಮ್ಮ ಜಮೀನುಗಳಲ್ಲಿ ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ಇರುವ ಸೌಲಭ್ಯಗಳ ಕುರಿತು ಕಾರ್ಯಕ್ರಮದಲ್ಲಿ ತಿಳಿಸಿದರು.

ADVERTISEMENT

ಈ ವೇಳೆ ರೈತ ನಂದಕುಮಾರ್, ಪ್ರಗತಿಪರ ರೈತರಾದ ಕೂಜಗೇರಿ ದಿವ್ಯೇಶ್, ಹೊಸಗುತ್ತಿ ಸುರೇಶ್, ಶನಿವಾರಸಂತೆ ರವಿ, ಅಪ್ಪಶೆಟ್ಟಿಹಳ್ಳಿ ಆನಂದ , ಹಿರಿಕರ ಗೋವಿಂದಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.