ಬಂಧನ
ಪ್ರಾತಿನಿಧಿಕ ಚಿತ್ರ
ಕುಶಾಲನಗರ: ನಿಷೇಧಿತ ಮಾದಕ ವಸ್ತು ಹಾಗೂ ಗಾಂಜಾ ಮಾರಾಟ ಮತ್ತು ಬಳಕೆ ಮಾಡುತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಮಾಲು ವಶಪಡಿಸಿಕೊಂಡಿದ್ದಾರೆ.
ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆ.25 ರಂದು ಬೈಚನಹಳ್ಳಿಯ ಜಾತ್ರೆ ಮೈದಾನದ ಬಳಿ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಬೈಚನಹಳ್ಳಿ ನಿವಾಸಿ ಪ್ರಮೋದ್ ಕುಮಾರ್ (34) ಮತ್ತು ರಾಧಕೃಷ್ಣ ಬಡಾವಣೆ ನಿವಾಸಿ ದರ್ಶನ್ ( 21) ಎಂವರನ್ನು ಬಂಧಿಸಿ , 25 ಗ್ರಾಂ ಗಾಂಜಾ ಹಾಗೂ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಫೆ. 26 ರಂದು ಮತ್ತೊಂದು ಪ್ರಕರಣದಲ್ಲಿ ಬೈಚನಹಳ್ಳಿಯ ರೈತ ಸಹಕಾರ ಭವನದ ಬಳಿ ನಿಷೇಧಿತ ಮಾದಕ ವಸ್ತುವನ್ನು ಬಳಕೆ ಮಾಡುತ್ತಿದ್ ಸ್ಥಳೀಯರಾದ ರವಿಕುಮಾರ್, ನಿಖಿಲ್ ಕುಮಾರ್, ಯೋಗಾನಂದ ಬಡಾವಣೆ ನಿವಾಸಿ ಶರತ್ ನಾಯಕ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪಿಐ ಬಿ.ಜಿ ಪ್ರಕಾಶ್, ಪಿಎಸ್ಐ ಎಚ್.ಟಿ. ಗೀತಾ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಯುವಕ, ಯುವತಿಯರು ಮಾದಕ ವ್ಯಸನಿಗಳಾವುದನ್ನು ತಡೆಯಲು ಡ್ರಗ್ಸ್, ಮಾದಕ ದ್ರವ್ಯ ಬಳಸುವ ಹಾಗೂ ಸರಬರಾಜು,ಮಾರಾಟ ಮಾಡುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಠಾಣೆ ಹಾಗೂ ಕೆ.ಎಸ್.ಪಿ. ತಂತ್ರಾಶದ ಮೂಲಕ ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು ಮಾಹಿತಿ ಒದಗಿಸುವವರ ವಿವರಗಳನ್ನು ಗುಪ್ತವಾಗಿಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.