ADVERTISEMENT

ಸೋಮವಾರಪೇಟೆ: ದುರ್ಗಾದೀಪ ನಮಸ್ಕಾರ ಪೂಜೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 13:48 IST
Last Updated 17 ಆಗಸ್ಟ್ 2024, 13:48 IST
ಸೋಮವಾರಪೇಟೆ ಕಕ್ಕೆಹೊಳೆ ಬಳಿಯಿರುವ ಮುತ್ತಪ್ಪ ಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಭಗವತಿ ದೇವಿಗೆ ಕರ್ಕಾಟಕ ಮಾಸದ ದುರ್ಗಾ ದೀಪ ನಮಸ್ಕಾರ ಪೂಜೆ ಗುರುವಾರ ಸಂಪನ್ನಗೊಂಡಿತು
ಸೋಮವಾರಪೇಟೆ ಕಕ್ಕೆಹೊಳೆ ಬಳಿಯಿರುವ ಮುತ್ತಪ್ಪ ಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಭಗವತಿ ದೇವಿಗೆ ಕರ್ಕಾಟಕ ಮಾಸದ ದುರ್ಗಾ ದೀಪ ನಮಸ್ಕಾರ ಪೂಜೆ ಗುರುವಾರ ಸಂಪನ್ನಗೊಂಡಿತು   

ಸೋಮವಾರಪೇಟೆ: ಇಲ್ಲಿನ ಕಕ್ಕೆಹೊಳೆ ಬಳಿಯ ಮುತ್ತಪ್ಪ ಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಒಂದು ತಿಂಗಳಿಂದ ಭಗವತಿ ದೇವಿಗೆ ನಡೆಯುತ್ತಿದ್ದ ಕರ್ಕಾಟಕ ಮಾಸದ ದುರ್ಗಾ ದೀಪ ನಮಸ್ಕಾರ ಪೂಜೆ ಗುರುವಾರ ಸಂಪನ್ನಗೊಂಡಿತು.

ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠ ನಂಬುದರಿ ಅವರ ನೇತೃತ್ವದಲ್ಲಿ ಜುಲೈ 16 ರಂದು ಆರಂಭಗೊಂಡ ದೀಪ ನಮಸ್ಕಾರ ಪೂಜೆಯ ಜೊತೆ, ಆ. 4ರಂದು ವಿಶೇಷ ಶತ್ರು ಸಂಹಾರ ಪೂಜೆ, ಆ. 9ರಂದು ನಾಗರ ಪಂಚಮಿ, ಆ. 10ರಂದು ಅಯ್ಯಪ್ಪ ಸ್ವಾಮಿಗೆ ನಿರಂಜನಾ ಸೇವೆ, 15ರಂದು ಭುವನೇಶ್ವರಿ ಸನ್ನಿಧಿಯಲ್ಲಿ ಮಹಾಲಕ್ಷ್ಮಿ ಹೋಮ ನಡೆದಿತ್ತು.

ಕರ್ಕಾಟಕ ಮಾಸದ ಪೂಜೆಯಲ್ಲಿ ಭುವನೇಶ್ವರಿ ದೇವಿಗೆ ವಾಲ್ ಕನ್ನಾಡಿ, ವರ್ಷಕೊಮ್ಮೆ ಶತ್ರು ಸಂಹಾರ ಪೂಜೆ ಸಲ್ಲಿಸುವ ಕರ್ಕಾಟಕ ಅಮಾವಾಸ್ಯೆಯಂದು ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲು ಮುಖವಾಡ ಮತ್ತು ಕೊನೆಯ ದಿನ ದೇವಿಗೆ ಚತುರ್ ಬಾಹು ಒಳಗೊಂಡ ಅಲಂಕಾರ ಮಾಡುವ ಮುಖವಾಡಗಳನ್ನು ಭಕ್ತರು ಅರ್ಚಕರಾದ ಮಣಿಕಂಠ ನಂಬುದರಿ ಅವರ ಸಹಕಾರದಲ್ಲಿ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ದೇವಿಗೆ ಸಮರ್ಪಿಸಲಾಯಿತು. ಪೂಜಾ ಕಾರ್ಯಗಳನ್ನು ಅರ್ಚಕ ಜಗದೀಶ್ ಉಡುಪ ನೆರವೇರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.