ನಾಪೋಕ್ಲು: ಸಮೀಪದ ನರಿಯಂದಡ, ಯವಕಪಾಡಿ, ಕುಂಜಿಲ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಕುಂಜಿಲ ಗ್ರಾಮದ ವಾಟೆಕಾಡು ಕಾಲೊನಿಯಲ್ಲಿ ಕಾಡಾನೆಯೊಂದು ದಾಂದಲೆ ನಡೆಸಿದೆ. ಕುಂಜಿಲ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮರ ಬೀಳಿಸಿದ್ದು ಇದರಿಂದ ವಿದ್ಯುತ್ ಕಂಬ ಮುರಿದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕಾಡು ಪ್ರಾಣಿಗಳಿಂದ ಬಡಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಎರಡು ವರ್ಷದಿಂದ ಈ ಭಾಗದಲ್ಲಿ ವಾಸಿಸುವವರ ಮನೆ ಆಸ್ತಿ ನಾಶವಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಯವಕಪಾಡಿ, ಮರಂದೋಡ, ಕುಂಜಿಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಕಾಫಿ ತೋಟಗಳು ಹಾನಿಯಾಗಿವೆ. ಇಲ್ಲಿ ಒಂಟಿ ಸಲಗ ಒಂದು ಅಡ್ಡಾಡುತ್ತಿದ್ದು ಪ್ರತಿವರ್ಷ ಸಮಸ್ಯೆ ಆಗುತ್ತಿದೆ. ಸಮಸ್ಯೆ ಪರಿಹರಿಸಲು ಇಲಾಖೆ ಮುಂದಾಗಬೇಕು ಎಂದು ವಾಟೆಕಾಡು ನಿವಾಸಿಗಳು ಆಗ್ರಹಿಸಿದರು.
ನಿಲ್ಲಿಸಿದ್ದ ಆಟೊ ಒಂದನ್ನು ಕಾಡಾನೆ ಕಳೆದ ವರ್ಷ ಜಖಂಗೊಳಿಸಿತ್ತು. ಕಾಡಾನೆ ತುಳಿದು ನಿವಾಸಿಯೊಬ್ಬರ ಕಾಲು ಮುರಿದಿದೆ. ನಿರಂತರವಾಗಿ ಕಾಡಾನೆಯಿಂದ ಕಾಲೊನಿ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಾಲೊನಿಯ ವಿದ್ಯುತ್ ಸಂಪರ್ಕ ಸರಿಪಡಿಸಬೇಕು. ಮರತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ನಿವಾಸಿ ಸತೀಶ್ ಆಗ್ರಹಿಸಿದರು.
.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.