ಕುಶಾಲನಗರ ಸಮೀಪದ ವಾಲ್ನೂರು ಹಾಗೂ ಮಾಲ್ದಾರೆ ಬಳಿಯ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ಕಾಡಾನೆ
ಕುಶಾಲನಗರ: ತಾಲ್ಲೂಕಿನ ಮೀನುಕೊಲ್ಲಿ ಮೀಸಲು ಅರಣ್ಯ ವ್ಯಾಪ್ತಿಯ ವಾಲ್ನೂರು ಹಾಗೂ ಮಾಲ್ದಾರೆ ಬಳಿಯ ಕಾವೇರಿ ನದಿಯಲ್ಲಿ ಮುಳುಗಿ ಹೆಣ್ಣಾನೆ ಮೃತಪಟ್ಟಿದ್ದು, ಗುರುವಾರ ಮೃತದೇಹ ಕಂಡು ಬಂದಿದೆ.
ನದಿಯ ಮಧ್ಯಭಾಗದಲ್ಲಿದ್ದ ಮೃತದೇಹವನ್ನು ಸಾಕಾನೆಯ ಸಹಾಯದಿಂದ ಹೊರ ತೆಗೆಯಲಾಯಿತು. ಎಸಿಎಫ್ ಎ.ಎ.ಗೋಪಾಲ, ಆರ್‌ಎಫ್ಓ ಆರ್.ರಕ್ಷಿತ್ ಹಾಗೂ ಮುಖ್ಯ ಪಶುವೈದ್ಯಾಧಿಕಾರಿ ಡಾ.ಮುಜೀಬ್, ಪಶುವೈದ್ಯಾಧಿಕಾರಿ ಡಾ.ಚಿಟ್ಟಿಯಪ್ಪ ನೇತೃತ್ವ ವಹಿಸಿದ್ದರು.
‘ಆನೆಗೆ ಗುಂಡು ತಗುಲಿಲ್ಲ, ವಿದ್ಯುತ್ ಸ್ಪರ್ಷವೂ ಆಗಿಲ್ಲ. ಮುಳುಗಿಯೇ ಮೃತಪಟ್ಟಿದೆ’ ಎಂದು ಅಧಿಕಾರಿಗಳು ದೃಢಪಡಿಸಿದರು. ಮಾಲ್ದಾರೆ ಅರಣ್ಯ ಪ್ರದೇಶದಲ್ಲಿ ಅಂತ್ಯಸಂಸ್ಕಾರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.