ADVERTISEMENT

ವನದೇವತೆಗೆ ಬೆಳ್ಳಿದಾರ ತೊಡಿಸಿದ ವರುಣ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 6:15 IST
Last Updated 18 ಆಗಸ್ಟ್ 2019, 6:15 IST
ಗೋಣಿಕೊಪ್ಪಲು ಸಮೀಪದ ಚೆಟ್ಟಳ್ಳಿ ಮಡಿಕೇರಿ ರಸ್ತೆಯ ಉದ್ದಕ್ಕೂ ಹಾಲ್ನೊರೆ ಚೆಲ್ಲುತ್ತಾ ಧುಮ್ಮಿಕ್ಕುತ್ತಿರುವ ಜಲಪಾತಗಳು
ಗೋಣಿಕೊಪ್ಪಲು ಸಮೀಪದ ಚೆಟ್ಟಳ್ಳಿ ಮಡಿಕೇರಿ ರಸ್ತೆಯ ಉದ್ದಕ್ಕೂ ಹಾಲ್ನೊರೆ ಚೆಲ್ಲುತ್ತಾ ಧುಮ್ಮಿಕ್ಕುತ್ತಿರುವ ಜಲಪಾತಗಳು   

ಗೋಣಿಕೊಪ್ಪಲು: ಒಂದು ವಾರ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಪರ್ವತ ಸಾಲುಗಳಲ್ಲಿ ಹಲವು ಜಲಪಾತಗಳು ಮೈದಳೆದಿವೆ.

ಸಿದ್ದಾಪುರದಿಂದ ಮಡಿಕೇರಿಗೆ ತೆರಳುವ ಮಾರ್ಗದ ಚೆಟ್ಟಳ್ಳಿ ಬಳಿ ಹತ್ತಾರು ಜಲಪಾತಗಳು ಉದ್ಭವಿಸಿ ನೋಡುಗರ ಕಣ್ಮನ ತಣಿಸುತ್ತಿವೆ. 9 ಕಿ.ಮೀ ದೂರದ ಪರ್ವತದ ಮೇಲಿಂದ ವರುಣ, ವನದೇವತೆಯ ಕೊರಳಿಗೆ ಬೆಳ್ಳಿದಾರ ತೊಡಿಸಿದಂತೆ ಕಂಡು ಬರುವ ಜಲಪಾತಗಳು ನಯನ ಮನೋಹರವಾಗಿವೆ.

ಚೆಟ್ಟಳಿ ಬಿಟ್ಟು 1 ಕಿ.ಮೀ ತೆರಳುತ್ತಿದ್ದಂತೆ ಎಡ ಭಾಗದ ಬೃಹತ್ ಪರ್ವತದ ಮೇಲಿಂದ ಹಾಲ್ನೊರೆ ಚೆಲ್ಲುತ್ತಾ ಧುಮ್ಮಿಕ್ಕುತ್ತಿವೆ. ಪ್ರಯಾಣಿಕರು ಇವುಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ, ಅವುಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಾ ಆನಂದಿಸುತ್ತಿದ್ದಾರೆ.

ADVERTISEMENT

ಕಾರಿನಲ್ಲಿ ಪ್ರಯಾಣಿಸುವವರು ಕೆಲ ಹೊತ್ತು ನಿಂತು ಜಲಪಾತದ ಸೊಬಗನ್ನು ಅನುಭವಿಸಿದರೆ, ಬನ್‌ಗಳಲ್ಲಿ ಪ್ರಯಾಣಿಸುವವರು ಜಲಪಾತದ ಹಾಲ್ನೊರೆಗೆ ಕೈ ಒಡ್ಡುತ್ತಾ ಮುಂದೆ ಸಾಗುತ್ತಿದ್ದಾರೆ. ಪ್ರಕೃತಿ ಪ್ರಿಯರು ಜಲಪಾತದ ಸೊಬಗನ್ನು ಸವಿಯುವುದಕ್ಕಾಗಿಯೇ ಈ ಭಾಗದಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.