ADVERTISEMENT

ವಿಸರ್ಜನೋತ್ಸವ: ಮುಸ್ಲಿಮರಿಂದ ನೀರು, ಪಾನೀಯ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:47 IST
Last Updated 6 ಸೆಪ್ಟೆಂಬರ್ 2025, 2:47 IST
<div class="paragraphs"><p>ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ಹಿಂದೂ ಗೆಳೆಯರ ಸೇವಾ ಟ್ರಸ್ಟ್ ವತಿಯಿಂದ ಮಹಾ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಗುರುವಾರ ನಡೆಯಿತು</p></div>

ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ಹಿಂದೂ ಗೆಳೆಯರ ಸೇವಾ ಟ್ರಸ್ಟ್ ವತಿಯಿಂದ ಮಹಾ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಗುರುವಾರ ನಡೆಯಿತು

   

ಸುಂಟಿಕೊಪ್ಪ: ಸಮೀಪದ ಏಳನೇ ಹೊಸಕೋಟೆಯ ಹಿಂದೂ ಗೆಳೆಯರ ಸೇವಾ ಟ್ರಸ್ಟ್ ವತಿಯಿಂದ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ–ಗಣೇಶ ಮೂರ್ತಿಯ ವಿಸರ್ಜನೋತ್ಸವವು ಗುರುವಾರ ಅದ್ದೂರಿಯಾಗಿ ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಅಲಂಕಾರ ಪೂಜೆ, ಕುಂಕುಮಾರ್ಚನೆ, ಮಹಾಪೂಜೆ ನೆರವೇರಿಸಿದ ನಂತರ ವಿದ್ಯುತ್ ದೀಪಾಲಂಕಾರದ ಮಂಟಪದಲ್ಲಿ ಗೌರಿ–ಗಣೇಶ ಉತ್ಸವ ಮೂರ್ತಿಯ ಮೆರವಣಿಗೆ ದೇವಾಲಯದಿಂದ ನಗಾರಿ, ಹುಲಿ ವೇಷ ಹಾಗೂ ಕಲಾ ತಂಡಗಳೊಂದಿಗೆ ಹೊರಟಿತು. ಅದೇ ಮಾರ್ಗವಾಗಿ ಏಳನೇ ಹೊಸಕೋಟೆಯ ಪ್ರಮುಖ ಬೀದಿಗಳಲ್ಲಿ ಸಾಗಿದಾದ ಭಕ್ತರು ಪೂಜೆ ಸಲ್ಲಿಸಿದರು. ನಂತರ ವಿಸರ್ಜಿಸಲಾಯಿತು.

ADVERTISEMENT

ನೀರು, ಪಾನೀಯ ವಿತರಣೆ:  ಗಣೇಶ ಮೂರ್ತಿಯ ವಿಸರ್ಜನೋತ್ಸವ ಮೆರವಣಿಗೆಯು ಮುಖ್ಯ ಬೀದಿಯಲ್ಲಿ ಸಾಗಿ ಮಸೀದಿಯ ಮುಂಭಾಗ ಬರುತ್ತಿದ್ದಂತೆ ಮುಸ್ಲಿಮರು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲ ಹಿಂದೂಗಳಿಗೆ ನೀರು ಮತ್ತು‌ ಪಾನೀಯ ವಿತರಿಸಿ ಸಹೋದರತೆ, ಬಾಂಧವ್ಯ ಮೆರೆದರು. 

ದಾಸಂಡ ರಮೇಶ್ ಚಂಗಪ್ಪ, ರಮೇಶ್, ರಜಾಕ್ ಮಸೀದಿಯ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.