
ಗೋಣಿಕೊಪ್ಪಲು: ಶ್ರೀಮಂಗಲ ಪದವಿಪೂರ್ವ ಕಾಲೇಜಿನ ತಂಡದ ಬಾಲಕ ಮತ್ತು ಬಾಲಕಿಯರು ಜಿಲ್ಲಾ ಮಟ್ಟದ ಕೊಕ್ಕೊ ಪಂದ್ಯದಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀಮಂಗಲ ಪಿಯು ಕಾಲೇಜಿನ ಬಾಲಕರು ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ವಿದ್ಯಾರ್ಥಿಗಳ ವಿರುದ್ಧ 8-6 ಪಾಯಿಂಟ್ ಗಳಿಂದ ಜಯಗಳಿಸಿದರು. ಇದೇ ಕಾಲೇಜಿನ ಬಾಲಕಿಯರು ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ಬಾಲಕಿಯರನ್ನು 9-3 ಪಾಯಿಂಟ್ ಗಳಿಸಿ ಜಯ ಪಡೆದರು.
ವಿಜೇತ ಬಾಲಕಿಯರ ತಂಡದಲ್ಲಿ ನಾಯಕಿ ಪಿ.ಎಂ.ಅಭಿನಂದಿತಾ, ವೈ.ಆರ್.ನೇತ್ರಾ, ಪಿ.ಎಂ.ಸುಶ್ಮಿತಾ, ಪಿ.ಕೆ.ಭಾಗ್ಯ, ಪಿ.ಎಸ್.ಶಾಲಿನಿ, ಜೆ.ಎಂ.ಸಿಂಚನಾ, ಜೆ.ಕೆ.ಶಿವಮ್ಮ, ಪಿ.ಪಿ.ಸುನಿತಾ,ಎಂ.ಕೃತಿಕಾ. ರೂಪಾ, ತಿತಿಮತಿ ಪಿಯು ಕಾಲೇಜಿನ ಪಿ.ಜಿ. ಲಕ್ಷ್ಮಿ ಪಾಲ್ಗೊಂಡಿದ್ದರು.
ಬಾಲಕರ ತಂಡದಲ್ಲಿ ಪಿ.ಎ.ಅನು, ವೈ,ಕೆ,ಮಹೇಶ್, ವೈ.ಕೆ.ಮುತ್ತ, ಪಿ.ಸಿ.ಅಜಿತ್, ಯು.ನಿತಿನ್, ಪಿ.ಜೆ.ಧನು, ಪಿ.ಸಿ.ಸತೀಶ್, ಪಿ.ಎ.ವಿಜು ,ಅಯ್ಯಪ್ಪ, ಹೇಮಂತ್, ಅಲನ್, ಪಿ.ಎಂ.ಸಂತೋಷ್, ಎಸ್.ಎಸ್.ಅರುಣ, ತಿತಿಮತಿ ಪಿಯು ಕಾಲೇಜಿನ ಜೆ.ಆರ್.ಪ್ರಜ್ವಲ್,ಭುವನ್, ಕಾವೇರಿ ಪಿಯು ಕಾಲೇಜಿನ ಎ.ಕೆ.ಬಿಪಿನ್ ಭಾಗವಹಿಸಿದ್ದರು.
ಅಥ್ಲೇಟಿಕ್ಸ್‌ನ ವಿವಿಧ ಸ್ಪರ್ಧೆಗಳಲ್ಲಿ ಪಿ.ಎ.ವಿಜು, ಪಿ.ಕೆ.ಸಂತೋಷ್, ಪಿ.ಕೆ.ಭಾಗ್ಯ, ಪಿ.ಪಿ.ಸುನಿತಾ, ರಾಧಾ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಾಲಿಬಾಲ್ ಟೂರ್ನಿಗೆ ಸಂಜನಾ ಆಯ್ಕೆ ಹೊಂದಿದ್ದರೆ, ಕಬ್ಬಡ್ಡಿ ಟೂರ್ನಿಗೆ ಪಿ.ಕೆ.ಸಂಜನಾ, ಅಭಿನಂದಿತಾ, ಭಾಗ್ಯ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ನಿರ್ದೇಶಕ ಚಂದ್ರಶೇಖರ್ ಮಾರ್ಗದರ್ಶಕರಾಗಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲ ಸೋಮಯ್ಯ, ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.