ADVERTISEMENT

ಗೋಣಿಕೊಪ್ಪಲು: ಟಿ.ಶೆಟ್ಟಿಗೇರಿ ಕೃಷಿಪತ್ತಿನ ಸಹಕಾರ ಸಂಘಕ್ಕೆ ₹70.11 ಲಕ್ಷ ಲಾಭ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:55 IST
Last Updated 6 ನವೆಂಬರ್ 2025, 6:55 IST
ಗೋಣಿಕೊಪ್ಪಲು ಬಳಿಯ ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ತೀತೀರ ಕೆ.ಸೋಮಣ್ಣ ಮಾತನಾಡಿದರು
ಗೋಣಿಕೊಪ್ಪಲು ಬಳಿಯ ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ತೀತೀರ ಕೆ.ಸೋಮಣ್ಣ ಮಾತನಾಡಿದರು   

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪ್ರಸಕ್ತ ಸಾಲಿನಲ್ಲಿ ಒಟ್ಟು ₹70.11 ಲಕ್ಷ ನಿವ್ವಳ ಲಾಭ ಪಡೆದಿದೆ ಎಂದು ಸಂಘದ ಅಧ್ಯಕ್ಷ ತೀತೀರ ಕೆ.ಸೋಮಣ್ಣ ಹೇಳಿದರು.

ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದಲ್ಲಿ 2524 ಸದಸ್ಯರಿದ್ದಾರೆ.
₹44.01 ಕೋಟಿ ದುಡಿಯುವ ಬಂಡವಾಳವಿದೆ. ಸದಸ್ಯರಿಗೆ ಒಟ್ಟು ₹18.86 ಕೋಟಿ ಕೆಸಿಸಿ ಮತ್ತು ₹16.90 ಕೋಟಿ ಇತರೆ ಸಾಲ ಸೇರಿ ಒಟ್ಟು ₹35.76 ಕೋಟಿ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.

₹3.19 ಕೋಟಿ ಮೌಲ್ಯದ ರಸಗೊಬ್ಬರ ಮಾರಾಟ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ 20ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ. ಸಂಘವು ಆಡಿಟ್‌ನಲ್ಲಿ ‘ಎ’ ಗ್ರೇಡ್ ಪಡೆದಿದ್ದು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಕ್ಕೆ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕಿನಿಂದ ಬಹುಮಾನ ಸಿಕ್ಕಿದೆ ಎಂದು ತಿಳಿಸಿದರು.

ADVERTISEMENT

ಉಪಾಧ್ಯಕ್ಷ ಸಿ.ಎನ್.ಕರುಂಬಯ್ಯ, ನಿರ್ದೇಶಕರಾದ ಕೆ.ಬಿ.ಅರುಣ, ಕೆ.ಎ.ವಿಶ್ವನಾಥ್, ಎಂ.ಎನ್.ಸುಮಂತ್, ಎಂ.ಯು.ಮುತ್ತಪ್ಪ, ಎಂ.ಎಂ. ನಾಚಪ್ಪ, ಸಿ.ಎಂ. ಮುದ್ದಯ್ಯ, ಸಿ.ಟಿ. ಸರಿತ, ಬಿ.ಸಿ. ಸುಶೀಲ, ಕೆ.ಎಸ್. ಉಮೇಶ್, ಜೆ.ಎಂ.ರವಿ, ಎಚ್.ಆರ್.ಸಂಪತ್, ಎ.ಎಂ. ವಿಶ್ವನಾಥ್, ಟಿ.ಬಿ.ಸುಬ್ರಮಣಿ, ಡಿಸಿಸಿ. ಬ್ಯಾಂಕ್ ವ್ಯವಸ್ಥಾಪಕಿ ಎಚ್.ಪಿ.ಲೌಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಸೀತಮ್ಮ ಮತ್ತು ಅಕೌಂಟೆಂಟ್ ಬಿ.ಎಂ.ಅನಿಲಾವತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.