ADVERTISEMENT

ಹಾಕಿ: ಅಪ್ಪಂಡೇರಂಡ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 14:04 IST
Last Updated 26 ಡಿಸೆಂಬರ್ 2024, 14:04 IST
ಅಪ್ಪಂಡೇರಂಡ ತಂಡಕ್ಕೆ ಪ್ರಶಸ್ತಿ
ಅಪ್ಪಂಡೇರಂಡ ತಂಡಕ್ಕೆ ಪ್ರಶಸ್ತಿ   

ಗೋಣಿಕೊಪ್ಪಲು: ಕಂಡಂಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾ ಸಮಿತಿ ಆಯೋಜಿಸಿದ್ದ ಹಾಕಿ ಟೂರ್ನಿಯಲ್ಲಿ ಅಪ್ಪಂಡೇರಂಡ ತಂಡ ಪ್ರಶಸ್ತಿ ಪಡೆದಿದ್ದು, ಸತತ ಮೂರು ವರ್ಷಗಳಿಂದ ಹ್ಯಾಟ್ರಿಕ್ ಗೆಲುವು ದಾಖಲಿಸುತ್ತಿದೆ.

ಕೊಂಗಂಡ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅಪ್ಪಂಡೇರಂಡ ತಂಡ 6-4 ಗೋಲುಗಳಿಂದ ಜಯಗಳಿಸಿತು. ನಿಗದಿತ ಸಮಯದ ವರೆಗೆ ಎರಡು ತಂಡಗಳು 2-2 ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಬಳಿಕ ಫೆನಾಲ್ಟಿ ಶೂಟ್‌ನಲ್ಲಿ  ಅಪಂಡರಂಡ ತಂಡ ಗೆಲುವು  ದಾಖಲಿಸಿತು.

ಅಪ್ಪಂಡೇರಂಡ ಪರ ಸೂರ್ಯ, ಮಾಚಯ್ಯ, ಸಾತ್ವಿಕ್, ಲಿಖಿತ್ ಗೋಲು ಹೊಡೆದರೆ ಕೊಂಗಂಡ ತಂಡದ ಪರ ಯತೀಶ್ ಕುಮಾರ್ ಮತ್ತು ಚಿರಂತ್ ಸೋಮಣ್ಣ ಗೋಲು ಗಳಿಸಿದರು.  

ADVERTISEMENT

ಪ್ರಶಸ್ತಿ ಕೆಂಜಂಗಡ ತಂಡ ಶಿಸ್ತು ಬದ್ಧ ತಂಡ ಪ್ರಶಸ್ತಿ ಗೆದ್ದುಕೊಂಡಿತು. ಅಪ್ಪಂಡೇರಂಡ ವಿನೀಶ್ ಪೂವಯ್ಯ ಅತ್ಯುತ್ತಮ ಆಟಗಾರ ಪ್ರಶಸ್ತಿ, ಕುಪ್ಪಂಡ ತಂಡದ ಸೆಲ್ವರಾಜ್ ಅತ್ಯಧಿಕ ಗೋಲು ಗಾರ ಪ್ರಶಸ್ತಿ, ಮೂಕಚಂಡ ತಂಡದ ಹರ್ಪಾಲ್ ಅತ್ಯುತ್ತಮ ಹಾಫ್ ಬ್ಯಾಕ್ ಪ್ರಶಸ್ತಿ, ಮೂಕಚಂಡ ತಮ್ಮಯ್ಯ ಅತ್ಯುತ್ತಮ ಗೋಲ್ ಕೀಪರ್, ಕುಪ್ಪಂಡ ತಂಡದ ಅತಿಥಿ ಆಟಗಾರ ಸೆಲ್ವರಾಜ್ ಅತ್ಯುತ್ತಮ ಮುನ್ನಡೆ ಆಟಗಾರ , ಕಾಳೇಂಗಡ ಅಶ್ವಿನ್ ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ, ಅಪ್ಪಂಡೇರಂಡ ತಂಡದ ಲಿಖಿತ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.

ಕೊಂಗಂಡ ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.