ADVERTISEMENT

ಗೋಣಿಕೊಪ್ಪಲು: ಕುಡಿಯುವ ನೀರಿನ ಬಳಕೆಗೆ ಪ್ರತ್ಯೇಕ್ ವಿದ್ಯುತ್ ಪೂರೈಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:45 IST
Last Updated 20 ಜೂನ್ 2025, 14:45 IST
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಹಳ್ಳಿಗಟ್ಟು ಮಾರ್ಗದಲ್ಲಿ ನೂತನ ವಿದ್ಯುತ್ ಕಂಬ ಅಳವಡಿಸಲಾಯಿತು
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಹಳ್ಳಿಗಟ್ಟು ಮಾರ್ಗದಲ್ಲಿ ನೂತನ ವಿದ್ಯುತ್ ಕಂಬ ಅಳವಡಿಸಲಾಯಿತು   

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಎದುರಾಗಿದ್ದ ವಿದ್ಯುತ್ ಕೊರತೆಯನ್ನು ಸೆಸ್ಕ್ ನವರು ಕಂಬಗಳನ್ನು ಅಳವಡಿಸಿ ವಿದ್ಯುತ್ ಪೂರೈಸುವ ಮೂಲಕ ಸಮಸ್ಯೆ ಪರಿಹರಿಸಿದ್ದಾರೆ.

ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟುವಿನಲ್ಲಿ 30 ಕಂಬಗಳನ್ನು ನೆಡುವ ಮೂಲಕ ಕುಡಿಯುವ ನೀರಿನ ಕೊಳವೆ ಬಾವಿಗೆ ವಿದ್ಯುತ್ ಸರಬರಾಜುಗೊಳಿಸಿ ಜನತೆಗೆ ನೀರು ಒದಗಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.

2019–20ನೇ ಸಾಲಿನಲ್ಲಿ ಅಂದಿನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಶಾಜಿ ಅಚ್ಯುತನ್ ಅವರು ಕೊಳವೆ ಬಾವಿ ತೋಡಿಸಿ ಜನತೆಗೆ ಕುಡಿಯುವ ನೀರು ಒದಗಿಸಲು ಮುಂದಾಗಿದ್ದರು. ಆದರೆ ನಿರಂತರವಾಗಿ ಕಾಡುತ್ತಿದ್ದ ವಿದ್ಯುತ್ ವೋಲ್ಟೇಜ್‌ನಿಂದ ನೀರಿನ ಸರಬರಾಜಿಗೆ ಸಮಸ್ಯೆ ಎದುರಾಗಿತ್ತು. ಇದೀಗ ಪೊನ್ನಂಪೇಟೆ ಸೆಸ್ಕ್ ನವರು ಹಳ್ಳಿಗಟ್ಟು ಭಾಗದಲ್ಲಿ ಹೊಸದಾಗಿ 30 ಕಂಬಗಳನ್ನು ಅಳವಡಿಸಿ ಪ್ರತ್ಯೇಕವಾದ ವಿದ್ಯುತ್ ಲೈನ್ ಎಳೆದು ವಿದ್ಯುತ್ ಸರಬರಾಜು ಗೊಳಿಸಿದ್ದಾರೆ.

ADVERTISEMENT

ಗೋಣಿಕೊಪ್ಪಲು, ಪಾಲಿಬೆಟ್ಟ ಮಾರ್ಗದಲ್ಲಿಯೂ ನೂತನ ಕಂಬಗಳನ್ನು ಅಳವಡಿಸಿ ಹೊಸ ಲೈನ್ ಎಳೆಯುತ್ತಿದ್ದಾರೆ. ಇದರಿಂದ ವೋಲ್ಟೇಜ್ ಸಮಸ್ಯೆ ನೀಗಿ ಗುಣಮಟ್ಟದ ವಿದ್ಯುತ್ ಲಭ್ಯವಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.