
ಎನ್.ಎಸ್. ಭೋಸರಾಜು
ಮಡಿಕೇರಿ: ‘ಜೆಡಿಎಸ್‌ನವರದ್ದು ಈಗ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಕಾಲ. ಅವರಿಗೆ ಒಳ್ಳೆಯ ಕಾಲ ಬರಲು ಸಾಧ್ಯವಿಲ್ಲ. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರ ನಾಟಕ ಎಲ್ಲರಿಗೂ ಗೊತ್ತಿರುವಂತದ್ದೇ’ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.
‘2028ರಲ್ಲೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವುದು ಶತಸಿದ್ಧ. ಈಗ 140 ಶಾಸಕರಿದ್ದೇವೆ. ಮುಂದಿನ ಚುನಾವಣೆಯಲ್ಲಿ 148 ಸ್ಥಾನ ಪಡೆಯಲಿದ್ದೇವೆ. ಇದು ನಮ್ಮ ಸಮೀಕ್ಷೆಯಿಂದಲೇ ಬಹಿರಂಗಗೊಂಡಿದೆ’ ಎಂದು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.
‘ಟ್ರಕ್ ಸಹಿತ ಹೈಜಾಕ್ ಆಗಿರುವ ₹ 400 ಕೋಟಿ ಕಾಂಗ್ರೆಸ್ಸಿನದ್ದು’ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ಅಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಹಣವನ್ನು ಸಾಗಿಸುತ್ತಿದ್ದರೆನ್ನಲಾಗಿದೆ. ಹೈಜಾಕ್ ಮಾಡಿದವರು, ದೂರು ನೀಡಿದವರು ಎಲ್ಲರೂ ಮಹಾರಾಷ್ಟ್ರದವರೇ. ಸದ್ಯ, ತನಿಖೆ ನಡೆಯುತ್ತಿದ್ದು ಕಾನೂನು ಕ್ರಮವಾಗಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.