ADVERTISEMENT

ಚಿತ್ರಗಳಲ್ಲಿ ನೋಡಿ: ಕೊಡಗಿನಲ್ಲಿ ಸುರಿದ ರಾಶಿ ರಾಶಿ ಆಲಿಕಲ್ಲು

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆಯಾಗಿದೆ. ಬಿರುಗಾಳಿಗೆ ಬೆಳೆಗಳು ನೆಲಕಚ್ಚಿವೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮುಳ್ಳೂರು, ನಿಡ್ತ, ಅಂಕನಹಳ್ಳಿ, ಗುಡುಗಳಲೆಯಲ್ಲಿ ರಾಶಿ ರಾಶಿ ಆಲಿಕಲ್ಲು ಸುರಿದಿದೆ. ದೊಡ್ಡವರು, ಮಕ್ಕಳು ಎಲ್ಲರು ಬೊಗಸೆಯಲ್ಲಿ ಆಲಿಕಲ್ಲು ಎತ್ತಿ ಸಂಭ್ರಮಿಸಿದರು. ಕಾಫಿ ತೋಟ, ರಸ್ತೆ, ಮನೆಯ ಚಾವಣಿ, ತೆಂಗಿನ ತೋಟ, ಅಡಿಕೆ ತೋಟ ಹಾಗೂ ಬಾಳೆ ತೋಟಗಳಲ್ಲಿ ಅಪಾರ ಪ್ರಮಾಣ ಆಲಿಕಲ್ಲು ಸುರಿದಿದೆ. ಆಲಿಕಲ್ಲು ಮಳೆಯಾಗುತ್ತಿರುವುದು ರೈತರ ಆತಂಕ ಹೆಚ್ಚಿಸಿದೆ.

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 12:54 IST
Last Updated 19 ಫೆಬ್ರುವರಿ 2021, 12:54 IST
ಕೊಡಗು: ಆಲಿಕಲ್ಲು ಹಿಡಿದಿರುವ ಜನರು
ಕೊಡಗು: ಆಲಿಕಲ್ಲು ಹಿಡಿದಿರುವ ಜನರು   
ಎಲ್ಲಿ ನೋಡಿದರೂ ರಾಶಿ ರಾಶಿ ಆಲಿಕಲ್ಲು
ಮಕ್ಕಳು ಬೊಗಸೆಯಲ್ಲಿ ಆಲಿಕಲ್ಲು ಎತ್ತಿ ಸಂಭ್ರಮಿಸಿದರು
ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆ
ಕೊಡಗು ಜಿಲ್ಲೆಯ ವಿವಿಧೆಡೆ ರಸ್ತೆಗಳಲ್ಲಿ ಆಲಿಕಲ್ಲು
ಕೊಡಗು ಜಿಲ್ಲೆಯ ವಿವಿಧೆಡೆ ತೋಟಗಳಲ್ಲಿ ಆಲಿಕಲ್ಲು
ಕಾಫಿ ತೋಟ, ರಸ್ತೆ, ಮನೆಯ ಚಾವಣಿ, ತೆಂಗಿನ ತೋಟ, ಅಡಿಕೆ ತೋಟ ಹಾಗೂ ಬಾಳೆ ತೋಟಗಳಲ್ಲಿ ಅಪಾರ ಪ್ರಮಾಣ ಆಲಿಕಲ್ಲು
ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮುಳ್ಳೂರು, ನಿಡ್ತ, ಅಂಕನಹಳ್ಳಿ, ಗುಡುಗಳಲೆಯಲ್ಲಿ ರಾಶಿ ರಾಶಿ ಆಲಿಕಲ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.