ADVERTISEMENT

ಹಾರಂಗಿ: 3 ಸಾವಿರ ಮಹಶೀರ್ ಮೀನು ಮರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 15:47 IST
Last Updated 7 ಮೇ 2025, 15:47 IST
ಕುಶಾಲನಗರ ಸಮೀಪದ ಹಾರಂಗಿ ಮತ್ಸ್ಯಧಾಮಕ್ಕೆ ಮಿನುಮರಿ ಉತ್ಪಾದನಾ ಕೇಂದ್ರದಿಂದ 3,000 ಮಹಶೀರ್ ಬಲಿತ ಮೀನುಮರಿಗಳನ್ನು ಬುಧವಾರ ಬಿಡುಗಡೆ ಮಾಡಲಾಯಿತು
ಕುಶಾಲನಗರ ಸಮೀಪದ ಹಾರಂಗಿ ಮತ್ಸ್ಯಧಾಮಕ್ಕೆ ಮಿನುಮರಿ ಉತ್ಪಾದನಾ ಕೇಂದ್ರದಿಂದ 3,000 ಮಹಶೀರ್ ಬಲಿತ ಮೀನುಮರಿಗಳನ್ನು ಬುಧವಾರ ಬಿಡುಗಡೆ ಮಾಡಲಾಯಿತು   

ಕುಶಾಲನಗರ: ತಾಲ್ಲೂಕಿನ ಹಾರಂಗಿ ಮತ್ಸ್ಯಧಾಮಕ್ಕೆ ಹಾರಂಗಿ ಮಿನುಮರಿ ಉತ್ಪಾದನಾ ಕೇಂದ್ರದಿಂದ 3,000 ಮಹಶೀರ್ ಬಲಿತ ಮೀನುಮರಿಗಳನ್ನು ಬುಧವಾರ ಬಿತ್ತನೆ ಮಾಡಲಾಯಿತು.

ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಮಿಲನ ಕೆ. ಭರತ್ ಮಾತನಾಡಿ, ‘ಈ ಪ್ರದೇಶ ಮೀನುಗಾರಿಕೆ ನಿಷೇಧಿತವಾಗಿದ್ದು, ಅಳಿವಿನಂಚಿನಲ್ಲಿರುವ ಮತ್ಸ್ಯ ಪ್ರಭೇದ ಇತರ ಸ್ಥಳೀಯ ತಳಿಗಳ ಸಂರಕ್ಷಣೆಗಾಗಿ ಮೀಸಲಿರಿಸಲ್ಪಟ್ಟಿದೆ. ಮಹಶೀರ್ ಸಂರಕ್ಷಣೆಯ ಉದ್ದೇಶದಿಂದ ಪ್ರತಿ ವರ್ಷವೂ ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಮೀನು ಮರಿಗಳನ್ನು ಉತ್ಪಾದಿಸಿ ಕಾವೇರಿ ನದಿ ಮತ್ತು ಹಾರಂಗಿ ಮತ್ಸ್ಯಧಾಮದಲ್ಲಿ ದಾಸ್ತಾನು ಮಾಡಲಾಗುತ್ತಿದೆ’ ಎಂದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್, ಮೀನುಗಾರಿಕೆ ಸಹಾಯಕ ನಿರ್ದೇಶಕ ಸಚಿನ್, ಶ್ರೀಕಾವೇರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.