ಸುಂಟಿಕೊಪ್ಪ: ಇಲ್ಲಿನ ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘ ಆಯೋಜಿಸಿರುವ ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮುಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ನಡೆಯಬೇಕಾಗಿದ್ದ ಸೆಮಿ ಫೈನಲ್ ಪಂದ್ಯಾವಳಿಗಳು ಮಳೆಯಿಂದಾಗಿ ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ಆಲಿಕುಟ್ಟಿ ಮಾಹಿತಿ ನೀಡಿದರು.
ಶನಿವಾರ ಮದ್ಯಾಹ್ನ 3 ಗಂಟೆಯಿಂದ ಸೆಮಿಫೈನಲ್ ಪಂದ್ಯಗಳು ನಡೆಯಬೇಕಾಗಿತ್ತು. ಧಾರಾಕಾರ ಮಳೆ ಮತ್ತು ಮೈದಾನ ಸಂಪೂರ್ಣವಾಗಿ ಕೆಸರಿನಿಂದ ಆವೃತರವಾಗಿ ಆಟಗಾರರು ಮೈದಾನಕ್ಕೆ ಇಳಿಯಲು ನಿರಾಕರಿಸಿದರು.ಟ್ರೋಫಿಯ ದಾನಿಗಳಾದ ಡಿ.ವಿನೋದ್ ಶಿವಪ್ಪ ಅವರ ನಿರ್ದೇಶನದ ಮೇರೆಗೆ ಸಂಘಟಕರು ತಾತ್ಕಾಲಿಕವಾಗಿ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಮುಂದೂಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಕೆ.ಎಂ.ಆಲಿಕುಟ್ಟಿ ಮತನಾಡಿ , ದಿನಾಂಕ ನಿಗದಿಗೊಳಿಸಿ ಸೆಮಿ ಪೈನಲ್ ಮತ್ತು ಪೈನಲ್ ಪಂದ್ಯಾವಳಿಯನ್ನು ನಡೆಸಲಾಗುವುದು ಎಂದರು.
ಸಂಘದ ಕಾರ್ಯದರ್ಶಿ ಬಿ.ಕೆ.ಪ್ರಶಾಂತ್ ಮಾತನಾಡಿ, 4 ತಂಡಗಳ ವ್ಯವಸ್ಥಾಪಕರು ಮತ್ತು ತಂಡದ ನಾಯಕರೊಂದಿಗೆ ಚರ್ಚಿಸಿ ಪಂದ್ಯಾವಳಿಯನ್ನು ಮುಂದೂಡಿದ್ದು, ಶೀಘ್ರವೇ ದಿನಾಂಕ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಸಂಘದ ಗೌರವಧ್ಯಕ್ಷ ಟಿ.ವಿ.ಪ್ರಸನ್ನ, ನಿರ್ದೇಶಕರುಗಳಾದ ಕೆ.ಕೆ.ಪ್ರಸಾದ್ ಕುಟ್ಟಪ್ಪ, ವಾಸು, ಶಬೀರ್, ಎಂ.ಎ.ಉಸ್ಮಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.