ADVERTISEMENT

ಕೊಡಗು: ಗಾಳಿ ಸಹಿತ ಮಳೆ ಆರ್ಭಟ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 14:25 IST
Last Updated 18 ಏಪ್ರಿಲ್ 2019, 14:25 IST
   

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಗುರುವಾರ ಧಾರಾಕಾರ ಮಳೆ ಸುರಿಯಿತು. ಗುಡುಗು, ಮಿಂಚು ಹಾಗೂ ಗಾಳಿಯೊಂದಿಗೆ ಒಂದು ಗಂಟೆ ಮಳೆ ಆರ್ಭಟಿಸಿತು.

ಸಂಜೆ 5.30ರ ಸುಮಾರಿಗೆ ಮಳೆ ಆರಂಭವಾಯಿತು. ಇದರಿಂದ ಚುನಾವಣೆ ಕರ್ತವ್ಯ ಮುಗಿಸಿ ಮತಗಟ್ಟೆಯಿಂದ ಇವಿಎಂ ತರಲು ಸಿಬ್ಬಂದಿ ಪರದಾಡಿದರು. ಕೊನೆಯಲ್ಲಿ ಮತದಾನ ಮಾಡಿ ಮನೆಗೆ ತೆರಳುತ್ತಿದ್ದ ಜನರೂ ಮಳೆಯಲ್ಲಿ ಸಿಲುಕಿ ತೊಂದರೆ ಅನುಭವಿಸಿದರು.

ಮಡಿಕೇರಿ, ಕುಶಾಲನಗರ, ಸುಂಟಿಕೊಪ್ಪ, ಬೆಸಗೂರು, ಬಿರುನಾಣಿ, ಮಾಯಮುಡಿ, ಕೋಟೂರು, ಬಲ್ಯಮುಂಡೂರು, ಬೆಕ್ಕೆಸೊಡ್ಲೂರು, ಬಿಳೂರು, ದೇವನೂರು, ಕುಂದ, ಹಳ್ಳಿಗಟ್ಟು, ನಾಲ್ಕೇರಿ, ಚೂರಿಕಾಡ್, ಬಾಡಗರಕೇರಿ, ಪೊನ್ನಂಪೇಟೆ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಕುಶಾಲನಗರ ಸಮೀಪದ ಹಾರಂಗಿ ರಸ್ತೆಯಲ್ಲಿ ಗಾಳಿಗೆ 5 ಮನೆಗಳ ಚಾವಣಿ ಹಾರಿಹೋಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.