ADVERTISEMENT

ಹಾಕಿ ಅಕಾಡೆಮಿ: ಪಾಂಡಂಡ ಬೋಪಣ್ಣ ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:25 IST
Last Updated 29 ಸೆಪ್ಟೆಂಬರ್ 2025, 6:25 IST
ವಿರಾಜಪೇಟೆಯಲ್ಲಿ ಭಾನುವಾರ ಕೊಡವ ಹಾಕಿ ಅಕಾಡೆಮಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಾಂಡಂಡ ಕೆ ಬೋಪಣ್ಣ ಹಾಗೂ ಉಳಿದ ಪದಾಧಿಕಾರಿಗಳು ಆಯ್ಕೆಗೊಂಡರು‌
ವಿರಾಜಪೇಟೆಯಲ್ಲಿ ಭಾನುವಾರ ಕೊಡವ ಹಾಕಿ ಅಕಾಡೆಮಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಾಂಡಂಡ ಕೆ ಬೋಪಣ್ಣ ಹಾಗೂ ಉಳಿದ ಪದಾಧಿಕಾರಿಗಳು ಆಯ್ಕೆಗೊಂಡರು‌   

ವಿರಾಜಪೇಟೆ: ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾಗಿ ಪಾಂಡಂಡ ಕೆ. ಬೋಪಣ್ಣ ಅವರು ಪುನರಾಯ್ಕೆಗೊಂಡಿದ್ದಾರೆ.

ಪಟ್ಟಣದ ಕೊಡವ ಸಮಾಜದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರು ಸೇರಿದಂತೆ ಒಟ್ಟು ಪದಾಧಿಕಾರಿಗಳು ಅಕಾಡೆಮಿಗೆ ಆಯ್ಕೆಗೊಂಡರು.

340 ಮತಗಳನ್ನು ಪಡೆದ ಪಾಂಡಂಡ ಕೆ. ಬೋಪಣ್ಣ ಅಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ ಚೆಪ್ಪುಡಿರ ಎಸ್ ಪೂಣಚ್ಚ, ಉಪಾಧ್ಯಕ್ಷರಾಗಿ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕೂತಂಡ ಸುರೇಶ್, ಬಾಚಿನಾಡಂಡ ಪ್ರದೀಪ್ ಪೂಣಚ್ಚ, ಗೌರವ ಕಾರ್ಯದರ್ಶಿಯಾಗಿ ಕುಲ್ಲೇಟಿರ ಅರುಣ್ ಬೇಬ, ಜಂಟಿ ಕಾರ್ಯದರ್ಶಿಯಾಗಿ ನಾಯಕಂಡ ದೀಪಕ್, ನಿರ್ದೇಶಕರಾಗಿ ಮುಕ್ಕಾಟಿರ ಬಿ ಸೋಮಯ್ಯ, ಬೊಳ್ಳೆಪಂಡ ಜೆ ಕಾರ್ಯಪ್ಪ, ಚೆಕ್ಕೆರ ಆದರ್ಶ್, ಕಂಬೀರಂಡ ರಾಖಿ ಪೂವಣ್ಣ, ಕಲಿಯಂಡ ಸಂಪನ್, ಮುದ್ದಂಡ ರಶೀನ್ ಸುಬ್ಬಯ್ಯ, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ ಹಾಗೂ ಮಂಡೇಪಂಡ ಮುಖೇಶ್ ಅವರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ADVERTISEMENT

ಒಟ್ಟು 473 ಕೊಡವ ಕುಟುಂಬಗಳು ಮತದಾನದ ಹಕ್ಕನ್ನು ಪಡೆದುಕೊಂಡಿದ್ದು, ಶೇ 90ರಷ್ಟು ಮತದಾನ ನಡೆಯಿತು. ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮತದಾನ ನಡೆದು ಬಳಿಕ ಮತ ಎಣಿಕೆ ಕಾರ್ಯ ನಡೆಯಿತು. ಚುನಾವಣಾಧಿಕಾರಿಯಾಗಿ ಚೋಕಿರ ಪೂವಯ್ಯ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿ ಎಂ.ಗಣೇಶ್ ಪೊನ್ನಪ್ಪ ಹಾಗೂ ಮಾಲೇಟಿರ ಶ್ರೀನಿವಾಸ್ ಅವರು ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.