ADVERTISEMENT

ಮಡಿಕೇರಿ: ಹೋಟೆಲ್, ರೆಸಾರ್ಟ್‌ ಸಿಬ್ಬಂದಿಗೆ ಹೈಟೆಕ್ ವಂಚಕರ ಗಾಳ!

ಎಚ್ಚರಿಕೆ ನೀಡಿದ ಕೊಡಗು ಜಿಲ್ಲಾ ಪೊಲೀಸರು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 4:28 IST
Last Updated 24 ಏಪ್ರಿಲ್ 2024, 4:28 IST
   

ಮಡಿಕೇರಿ: ಕೊಡಗು ಜಿಲ್ಲಾ ಹೋಟೆಲ್, ರೆಸಾರ್ಟ್‌ ಹಾಗೂ ಹೋಂಸ್ಟೇ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಹೈಟೆಕ್ ವಂಚಕರ ತಂಡವೊಂದು ಕಾರ್ಯನಿರ್ವಹಿಸುತ್ತಿರುವ ಕುರಿತು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಮುಂಗಡ ಬುಕ್ಕಿಂಗ್ ಪಾವತಿಗಾಗಿ ಹೇಳುವ ಹಣಕ್ಕಿಂತ ಹೆಚ್ಚು ಹಣವನ್ನು ಕಣ್ತಪ್ಪಿನಿಂದ ಗೂಗಲ್‌ ಪೇ, ಫೋನ್‌ಪೇ ಮೂಲಕ ಮಾಡಿರುವುದಾಗಿ ವಂಚಕರು ನಕಲಿ ಸ್ಕ್ರೀನ್ ಶಾಟ್ ಕಳುಹಿಸುತ್ತಾರೆ. ತಮಗೆ ತುರ್ತು ಹಣದ ಅಗತ್ಯವಿದ್ದು, ಹೆಚ್ಚು ಹಣವನ್ನು ವಾಪಸ್ ನೀಡುವಂತೆ ಮನವಿ ಮಾಡುತ್ತಾರೆ. ನಕಲಿ ಸ್ಕ್ರೀನ್ ಶಾಟ್ ನೋಡಿದ ಸಿಬ್ಬಂದಿ ಬಹುಶಃ ಹಣ ಖಾತೆಗೆ ಬಂದಿರಬಹುದು ಎಂದು ಭಾವಿಸಿ, ಹೆಚ್ಚುವರಿ ಹಣವನ್ನು ವಾಪಸ್ ಕಳುಹಿಸುತ್ತಾರೆ. ಆದರೆ, ವಾಸ್ತವದಲ್ಲಿ ಯಾವುದೇ ಹಣ ಹೋಟೆಲ್‌ನವರ ಖಾತೆಗೆ ಬಂದಿರುವುದಿಲ್ಲ. ಇದೇ ಮಾದರಿಯಲ್ಲಿ ಹಲವು ಹೋಟೆಲ್, ರೆಸಾರ್ಟ್‌, ಹೋಂಸ್ಟೇ ಮಾಲೀಕರನ್ನು ಹೈಟೆಕ್ ವಂಚಕರು ಈಗಾಗಲೇ ವಂಚಿಸಿದ್ದು, ಎಚ್ಚರದಿಂದ ಇರುವಂತೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT