ADVERTISEMENT

‘ಡ್ರೀಮ್ 11’ ಆನ್‌ಲೈನ್ ಕ್ರಿಕೆಟ್ ಆಟದಲ್ಲಿ ಕೊಡಗಿನ ರಫೀಕ್‌ಗೆ 7.94 ಲಕ್ಷ ಬಹುಮಾನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 13:09 IST
Last Updated 6 ನವೆಂಬರ್ 2020, 13:09 IST
ರಫೀಕ್
ರಫೀಕ್   

ನಾಪೋಕ್ಲು: ಐ‍ಪಿಎಲ್‌ 2020ರ ಆವೃತ್ತಿಯನ್ನು ಪಾಯೋಜಿಸಿರುವ ‘ಡ್ರೀಮ್ 11’ಆನ್‌ಲೈನ್ ಕ್ರಿಕೆಟ್ ಆಟ ಆಯೋಜಿಸಿದ್ದು ಅದರಲ್ಲಿ ಮೂರ್ನಾಡು ಸಮೀಪದ ಬೇತ್ರಿ ಗ್ರಾಮದ ರಫೀಕ್ ಅವರು ಈ ಆಟದಲ್ಲಿ ₹ 7.94 ಲಕ್ಷ ಗೆದ್ದಿದ್ದಾರೆ.

ಈಚೆಗೆ ಯಎಇನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೈದರಾಬಾದ್- ಮುಂಬೈ ತಂಡಗಳ ನಡುವಿನ ಪಂದ್ಯದಲ್ಲಿ ಆನ್‌ಲೈನ್ ಮೂಲಕ ಉತ್ತಮ ಆಟಗಾರರನ್ನು ಆಯ್ಕೆ ಮಾಡಿದ್ದು ‘ಡ್ರೀಮ್ 11’ನಲ್ಲಿ ₹ 1 ಕೋಟಿ ವಿಜೇತರಾದ 16 ಮಂದಿ ಸ್ಪರ್ಧಿಗಳಲ್ಲಿ ರಫೀಕ್ ಒಬ್ಬರಾಗಿದ್ದಾರೆ.

ವಿಜೇತ ಹದಿನಾರು ಸ್ಪರ್ಧಿಗಳಿಗೆ ತಲಾ ₹ 7.94 ಲಕ್ಷ ದೊರೆತಿದೆ. ರಫೀಕ್ ಬೇತ್ರಿ ಗ್ರಾಮದಲ್ಲಿ ದಿನಸಿ ಅಂಗಡಿಯ ಮಾಲೀಕರಾಗಿದ್ದು ವ್ಯಾಪಾರ ನಡೆಸುತ್ತಿದ್ದರು. ಲಾಕ್‌ಡೌನ್ ಅವಧಿಯಲ್ಲಿ ವ್ಯಾಪಾರ ಇಳಿಮುಖಗೊಂಡು ಸಂಕಷ್ಟದ ಪರಿಸ್ಥಿತಿ ಇತ್ತು. ‘ಡ್ರೀಮ್ 11’ ಗೆಲುವು ಸಂತಸ ತಂದಿದೆ ಎಂದು ರಫೀಕ್ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.