ADVERTISEMENT

ಕುಶಾಲನಗರ: ಆಫ್ರಿಕನ್ ಹಂದಿ ಜ್ವರ ದೃಢ?

​ಪ್ರಜಾವಾಣಿ ವಾರ್ತೆ
Published 19 ಮೇ 2025, 16:22 IST
Last Updated 19 ಮೇ 2025, 16:22 IST
   

ಮಡಿಕೇರಿ: ಕುಶಾಲನಗರ ತಾಲ್ಲೂಕಿನ ಫಾರಂ ಒಂದರಲ್ಲಿ ಮಾತ್ರವೇ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ಜಿಲ್ಲೆಯ ಬೇರೆಲ್ಲೂ ಈ ಪ್ರಕರಣಗಳು ದೃಢಪಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

ಫಾರಂ ಒಂದರಲ್ಲಿ ಮಾತ್ರವೇ 52 ಹಂದಿಗಳು ಈ ಜ್ವರದಿಂದ ಮೃತಪಟ್ಟಿದ್ದವು. ಈ ಫಾರಂ ಅನ್ನು ಸದ್ಯ ಮುಚ್ಚಲಾಗಿದೆ. ಇನ್ನುಳಿದಂತೆ ಬೇರೆಲ್ಲೂ ಈ ಕಾಯಿಲೆ ಕಂಡು ಬಂದಿಲ್ಲ. ಇದು ಕೇವಲ ಹಂದಿಗಳಲ್ಲಿ ಮಾತ್ರವೇ ಕಂಡು ಬರುವಂತಹ ಕಾಯಿಲೆಯಾಗಿದ್ದು, ಇದು ಮನುಷ್ಯರಿಗೆ ಅಥವಾ ಇತರ ಪ್ರಾಣಿಗಳಿಗೆ ಹರಡುವುದಿಲ್ಲ ಎಂದು ಪಶುಪಾಲನಾ ಇಲಾಖೆಯ ಮೂಲಗಳು ಖಚಿತಪಡಿಸಿವೆ. 

ಇಲಾಖೆ ಇನ್ನೂ ಆಫ್ರಿಕನ್‌ ಹಂದಿ ಜ್ವರ ಪತ್ತೆಯಾಗಿರುವ ಕುರಿತು ಘೋಷಿಸಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.