ADVERTISEMENT

ವಿರಾಜಪೇಟೆ: ನೌಕಾಪಡೆಯ ಸಬ್ ಲೆಫ್ಟಿನಂಟ್ ಆಗಿ ಕಾಡ್ಯಮಾಡ ರಿಯಾ ಅಚ್ಚಯ್ಯ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 11:27 IST
Last Updated 4 ಜೂನ್ 2025, 11:27 IST
ಮೂಲತಃ ದಕ್ಷಿಣ ಕೊಡಗಿನ ಅತ್ತೂರು ಗ್ರಾಮದ ಕಾಡ್ಯಮಾಡ ರಿಯಾ ಅಚ್ಚಯ್ಯ ಅವರು ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನಂಟ್ ಆಗಿ ನಿಯೋಜನೆಗೊಂಡಿದ್ದಾರೆ
ಮೂಲತಃ ದಕ್ಷಿಣ ಕೊಡಗಿನ ಅತ್ತೂರು ಗ್ರಾಮದ ಕಾಡ್ಯಮಾಡ ರಿಯಾ ಅಚ್ಚಯ್ಯ ಅವರು ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನಂಟ್ ಆಗಿ ನಿಯೋಜನೆಗೊಂಡಿದ್ದಾರೆ   

ವಿರಾಜಪೇಟೆ: ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನಂಟ್ ಆಗಿ ಕೊಡಗಿನ ಕಾಡ್ಯಮಾಡ ರಿಯಾ ಅಚ್ಚಯ್ಯ ನಿಯೋಜನೆಗೊಂಡಿದ್ದಾರೆ.

ಮೈಸೂರಿನಲ್ಲಿ ನೆಲೆಸಿರುವ ಕಾಡ್ಯಮಾಡ ಅರುಣ್ ಅಚ್ಚಯ್ಯ ಮತ್ತು ಪ್ರಿಯಾ ದಂಪತಿಯ ಪುತ್ರಿಯಾಗಿರುವ ಇವರು, ದಕ್ಷಿಣ ಕೊಡಗಿನ ಅತ್ತೂರು ಗ್ರಾಮದವರು. ಮೈಸೂರು ವಿಜಯನಗರದ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನ ಮಾಹಿತಿ ವಿಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಅವರು, ಹಿಂದೆ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪರ 2 ಕಂಚಿನ ಪದಕ ಗೆದ್ದ ಅಂತರರಾಷ್ಟ್ರೀಯ ಸ್ಕೇಟರ್ ಕೂಡ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.