ಸೋಮವಾರಪೇಟೆ: ತಾಲ್ಲೂಕಿನ ಗರ್ವಾಲೆ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಕ್ರೀಡಾ ಸಮಿತಿ ವತಿಯಿಂದ ಕೈಲ್ ಪೋಳ್ದ್ ಹಬ್ಬದ ಪ್ರಯುಕ್ತ ಗ್ರಾಮದ ಕೊತ್ತನಮೊಟ್ಟೆ ಆಟೋಟ ಮೈದಾನದಲ್ಲಿ ಗ್ರಾಮಸ್ಥರು ಹಾಗೂ ಸಮಾಜ ಬಾಂಧವರಿಗೆ ಬುಧವಾರ ವಿವಿಧ ಕ್ರೀಡಾಸ್ಪರ್ಧೆ ನಡೆಯಿತು.
ಕಾರ್ಯಕ್ರಮದಲ್ಲಿ ಹಬ್ಬದ ವಿಶೇಷ ಹಂಬು ಹೊಡೆಯುವ ಕಾರ್ಯದಲ್ಲಿ ಪೊನ್ನಪ್ಪ, ಬೋಜಣ್ಣ ಪೂಜೆ ನೆರವೇರಿಸಿದರು. ಕ್ರೀಡಾ ಸ್ಪರ್ಧೆಯಯಲ್ಲಿ ಹಗ್ಗ ಜಗ್ಗಾಟ, ಗುಡ್ಡಗಾಡು ಓಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಮ್ಯಾರಾಥಾನ್, ಗೂಟಕ್ಕೆ ರಿಂಗ್ ಹಾಕುವುದು ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು.
ಹಗ್ಗ ಜಗ್ಗಾಟದಲ್ಲಿ ಗೀಜಿಗಂಡ ತಂಡ ಪ್ರಥಮ ಬಹುಮಾನ ಪಡೆಯಿತು. ಪೆಮ್ಮಯ್ಯ ತಂಡ ದ್ವಿತೀಯ ಸ್ಥಾನ ಪಡೆಯಿತು. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪಾಸುರ ಮನು ಪ್ರಥಮ, ಬಾಚಳ್ಳಿರ ಪೆಮ್ಮಯ್ಯ ದ್ವಿತೀಯ ಶಾಟ್‌ಪಟ್‌ನಲ್ಲಿ ಗೀಜಿಗಂಡ ಚೇತನ್ ಪ್ರಥಮ, ಗೀಜಿಗಂಡ ವನ ದ್ವಿತೀಯ ಹಾಗೂ ಗೀಜಿಗಂಡ ಲೋಕೇಶ್ ತೃತೀಯ ಸ್ಥಾನಗಳಿಸಿದರು.
ಬಹುಮಾನ ವಿತರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಕ್ರೀಡಾ ಸಮಿತಿಯ ಆರೊಡ ಅಪ್ಪಚ್ಚು ವಹಿಸಿದ್ದರು. ಉಪಾಧ್ಯಕ್ಷ ಪಾಸುರ ಮನು, ಗೀಜಿಗಂಡ ಲೋಕೇಶ್, ತಾಚಿಮಂಡ ಈರಪ್ಪ, ಪೆಮ್ಮಯ್ಯ, ಸೋಮಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.